ಐಪಿಎಲ್ 13 ತರಬೇತಿಗೆ ಬರಲ್ಲ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟಿಗರು

ಶನಿವಾರ, 1 ಆಗಸ್ಟ್ 2020 (10:31 IST)
ಮುಂಬೈ: ಐಪಿಎಲ್ 13 ಗೆ ಸಿದ್ಧತೆ ನಡೆಸಲು ಎಲ್ಲಾ ಫ‍್ರಾಂಚೈಸಿಗಳು ತಮ್ಮ ತಂಡದ ಆಟಗಾರರಿಗೆ ಯುಎಇನಲ್ಲಿ ತರಬೇತಿ ಶಿಬಿರ ನಡೆಸಲಿದೆ. ಆದರೆ ಈ ಶಿಬಿರಕ್ಕೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು ಬರುವುದು ಅನುಮಾನವಾಗಿದೆ.


ಈಗಿನ ಲೆಕ್ಕಾಚಾರದ ಪ್ರಕಾರ ಸೆಪ್ಟೆಂಬರ್ 19 ರಿಂದ ತರಬೇತಿ ಶಿಬಿರ ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ ಸೆಪ್ಟೆಂಬರ್ 16 ರಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಸರಣಿ ನಡೆಯಲಿದೆ.

ಹೀಗಾಗಿ ಈ ಎರಡೂ ದೇಶಗಳ ಕ್ರಿಕೆಟಿಗರು ಐಪಿಎಲ್ ಗೆ ತಮ್ಮ ತಂಡವನ್ನು ತಡವಾಗಿ ಕೂಡಿಕೊಳ್ಳಲಿದ್ದಾರೆ. ಐಪಿಎಲ್ ಆರಂಭಕ್ಕೆ ನಾಲ್ಕು ದಿನಗಳ ಮೊದಲಷ್ಟೇ ಈ ಎರಡೂ ರಾಷ್ಟ್ರಗಳ ನಡುವಿನ ಕ್ರಿಕೆಟ್ ಸರಣಿ ಮುಕ್ತಾಯವಾಗಲಿದೆ. ಆದರೆ ಯುಎಇ ನಿಯಮದ ಪ್ರಕಾರ ವಿದೇಶಿಗರು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಗೊಳಗಾಗಬೇಕು. ಹೀಗಾಗಿ ಈ ಆಟಗಾರರು ಆರಂಭಿಕ ಐಪಿಎಲ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಪಿಎಲ್ ಗೂ ಮೊದಲೇ ನಡೆಯಲಿದೆ ಟೀಂ ಇಂಡಿಯಾ ಆಟಗಾರರಿಗೆ ಡ್ರಿಲ್