ಮಗನ ಫೋಟೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಶನಿವಾರ, 1 ಆಗಸ್ಟ್ 2020 (10:57 IST)
ಮುಂಬೈ: ಮೊನ್ನೆಯಷ್ಟೇ ಗಂಡು ಮಗುವಿನ ತಂದೆಯಾದ ಟೀಂ ಇಂಡಿಯಾ ಆಲ್ ರೌಂಡರ್ ಈಗ ತಮ್ಮ ಪುತ್ರನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

 

ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡ ಸುಂದರ ಫೋಟೋವನ್ನು ಪ್ರಕಟಿಸಿರುವ ಹಾರ್ದಿಕ್ ಪಾಂಡ್ಯ ‘ದೇವರು ನಮಗೆ ಕೊಟ್ಟ ಉಡುಗೊರೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಹಾರ್ದಿಕ್ ಗೆಳತಿ ನತಾಶಾ ಮೊನ್ನೆಯಷ್ಟೇ ಮುಂಬೈನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಹಾರ್ದಿಕ್ ಪ್ರಕಟಿಸುತ್ತಿದ್ದಂತೇ ಹಲವರು ಕಾಮೆಂಟ್ ಮಾಡಿ ಅಭಿನಂದಿಸಿದ್ದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಪಿಎಲ್ 13 ತರಬೇತಿಗೆ ಬರಲ್ಲ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟಿಗರು