Publish Date: Wed, 22 Sep 2021 (11:33 IST)
Updated Date: Wed, 22 Sep 2021 (10:06 IST)
ದುಬೈ: ಐಪಿಎಲ್ 14 ರ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಮೊಣಕಾಲಿನ ಗಾಯದಿಂದಾಗಿ ಕಣಕ್ಕಿಳಿಯದೇ ಇದ್ದಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಫಿಟ್ ಆಗುತ್ತಿದ್ದಾರೆ.
ಫಿಟ್ ಆಗಿ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ಶೇರ್ ಮಾಡಿರುವ ರೋಹಿತ್ ಶರ್ಮಾ ಮತ್ತೆ ಕಣಕ್ಕಿಳಿಯಲು ಸಿದ್ಧರಾಗಿರುವುದಾಗಿ ಸೂಚನೆ ನೀಡಿದ್ದಾರೆ.
ಇನ್ನು, ಮುಂಬೈ ಕೋಚ್ ಮಹೇಲ ಜಯವರ್ಧನೆ ಕೂಡಾ ರೋಹಿತ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಫಿಟ್ ಆಗಲಿದ್ದಾರೆ ಎಂದಿದ್ದರು. ರೋಹಿತ್ ಇಲ್ಲದೇ ಮುಂಬೈ ಬ್ಯಾಟಿಂಗ್ ಕಳೆಗುಂದಿತ್ತು. ಅವರ ವಾಪಸಾತಿ ತಂಡಕ್ಕೆ ಹೊಸ ಬಲ ತುಂಬಲಿದೆ.