Select Your Language

Notifications

webdunia
webdunia
webdunia
webdunia

ಐಪಿಎಲ್ 14: ಡೆಲ್ಲಿಗೆ ಹೈದರಾಬಾದ್ ಸವಾಲು

ಐಪಿಎಲ್ 14: ಡೆಲ್ಲಿಗೆ ಹೈದರಾಬಾದ್ ಸವಾಲು
ದುಬೈ , ಬುಧವಾರ, 22 ಸೆಪ್ಟಂಬರ್ 2021 (09:20 IST)
ದುಬೈ: ಐಪಿಎಲ್ 14 ರಲ್ಲಿ ಇಂದಿನ ಪಂದ್ಯ ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.


ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಡೆಲ್ಲಿಯ ಘಟಾನುಘಟಿ ಬ್ಯಾಟ್ಸ್ ಮನ್ ಗಳೇ ತಂಡದ ಶಕ್ತಿ. ಶಿಖರ್ ಧವನ್ ಈ ಕೂಟದ ಗರಿಷ್ಠ ರನ್ ಸ್ಕೋರರ್. ಅವರ ಜೊತೆಗೆ ರಿಷಬ್ ಪಂತ್, ಶ್ರೇಯಸ್ ಐಯರ್ ವಾಪಸಾತಿ ತಂಡಕ್ಕೆ ಪ್ಲಸ್ ಪಾಯಿಂಟ್.

ಅತ್ತ ಸನ್ ರೈಸರ್ಸ್ ಹೈದರಾಬಾದ್ ಮೊದಲ ಹಂತದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಈಗ ವ್ಯತ್ಯಸ್ಥ ವಾತಾವರಣದಲ್ಲಿ ತಂಡದ ಪ್ರದರ್ಶನ ಹೇಗಿರುತ್ತದೆ ನೋಡಬೇಕಿದೆ. ಜೊತೆಗೆ ಡೇವಿಡ್ ವಾರ್ನರ್ ಕೈಯಿಂದ ನಾಯಕತ್ವ ಕೇನ್ ವಿಲಿಯಮ್ಸ್ ಪಾಲಾಗಿದೆ. ಹೀಗಾಗಿ ವಾರ್ನರ್ ನಾಯಕತ್ವದ ಒತ್ತಡವಿಲ್ಲದೇ ತಮ್ಮ ನ್ಯಾಚುರಲ್ ಬ್ಯಾಟಿಂಗ್ ಮಾಡಬಹುದಾಗಿದೆ. ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಕೆಆರ್ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಕೊಹ್ಲಿ ಭಾಷಣ