Publish Date: Mon, 15 Jun 2020 (08:57 IST)
Updated Date: Mon, 15 Jun 2020 (08:58 IST)
ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಮ್ಮ ಅಭಿಮಾನಿಗಳ ಜತೆ ನಿನ್ನೆ ಇನ್ ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರಾವಳಿ ನಡೆಸಿದ್ದರು. ಹಲವರು ರೋಹಿತ್ ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ನಡುವೆ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ ಬಗ್ಗೆ ಒಂದು ಶಬ್ಧದಲ್ಲಿ ಹೇಳಿ ಎಂದು ಪ್ರಶ್ನೆ ಮಾಡಿದ್ದಾನೆ. ಆದರೆ ಆ ಅಭಿಮಾನಿ ಕೊಹ್ಲಿ ಎಂದು ಬರೆಯುವಾಗ ಸ್ಪೆಲ್ಲಿಂಗ್ ತಪ್ಪು ಮಾಡಿದ್ದಾನೆ.
ಹೀಗಾಗಿ ರೋಹಿತ್ ಕೊಹ್ಲಿ ಬಗ್ಗೆ ಹೇಳುವ ಬದಲು ಮೊದಲು ಸ್ಪೆಲ್ಲಿಂಗ್ ಸರಿ ಮಾಡಿ ಬರೆಯಿರಿ ಎಂದು ಕಾಲೆಳೆದಿದ್ದಾರೆ. ಇನ್ನು ಕೆಎಲ್ ರಾಹುಲ್ ಬಗ್ಗೆ ಹೇಳಿ ಎಂದು ಒಬ್ಬಾತ ಪ್ರಶ್ನಿಸಿದ್ದಕ್ಕೆ ಸೂಪರ್ ಎನ್ನುವಂತೆ ಇಮೋಜಿ ಬರೆದಿದ್ದಾರೆ.