Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ನನಗೆ ಹಲವು ಬಾರಿ ಸಹಾಯ ಮಾಡಿದ್ದಾರೆ: ಕೆಎಲ್ ರಾಹುಲ್

ರೋಹಿತ್ ಶರ್ಮಾ ನನಗೆ ಹಲವು ಬಾರಿ ಸಹಾಯ ಮಾಡಿದ್ದಾರೆ: ಕೆಎಲ್ ರಾಹುಲ್
ಬೆಂಗಳೂರು , ಭಾನುವಾರ, 14 ಜೂನ್ 2020 (09:29 IST)
ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಸ್ಥಾನಕ್ಕೆ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ನಡುವೆ ಪೈಪೋಟಿಯಿರಬಹುದು. ಆದರೆ ತಮ್ಮ ನಡುವೆ ಈ ರೀತಿಯ ಭಾವನೆಯಿಲ್ಲ ಎಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ.


ರೋಹಿತ್ ಹಲವು ಬಾರಿ ನನಗೆ ಸಹಾಯ ಮಾಡಿದ್ದಾರೆ. ಅವರು ನನಗೆ ಸ್ಪೂರ್ತಿ ತುಂಬಿದ್ದಾರೆ ಎಂದು ರಾಹುಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಕೆಲವು ಆಟಗಾರರು ಸಚಿನ್ ಆಟ ನೋಡುತ್ತಿದ್ದರೆ ಮೈಮರೆತುಬಿಡುತ್ತಾರಂತೆ. ಅದೇ ರೀತಿ ನಾನು ರೋಹಿತ್ ಬ್ಯಾಟಿಂಗ್ ನ್ನು ಇನ್ನೊಂದು ತುದಿಯಲ್ಲಿದ್ದು ನೋಡುತ್ತಿದ್ದರೆ ಮೈಮರೆಯುವೆ. ಅವರ ದೊಡ್ಡ ಹೊಡೆತಗಳ ಅಭಿಮಾನಿ ನಾನು. ರೋಹಿತ್ ಹಲವು ಬಾರಿ ನನಗೆ ಬೆಂಬಲಿಸಿದ್ದಾರೆ. ನನ್ನಲ್ಲಿ ಅವರಿಗೆ ತುಂಬಾ ವಿಶ್ವಾಸವಿದೆ. ಮೈದಾನದ ಹೊರಗೂ ನನ್ನ ಜತೆಗೆ ನಿಂತಿದ್ದಾರೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗಾಗಿ ಕವಿತೆ ಬರೆದ ಕ್ರಿಕೆಟಿಗ ರವೀಂದ್ರ ಜಡೇಜಾ