Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಈ ಎರಡು ಗುಣ ಪತ್ನಿ ರಿತಿಕಾಗೆ ಇಷ್ಟವೇ ಆಗಲ್ವಂತೆ!

ರೋಹಿತ್ ಶರ್ಮಾ
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಎಷ್ಟು ಒಳ್ಳೆಯ ಫ್ಯಾಮಿಲಿ ಮ್ಯಾನ್ ಎನ್ನುವುದು ಎಲ್ಲರಿಗೂ ಗೊತ್ತು. ಪತ್ನಿ ರಿತಿಕಾರನ್ನು ತುಂಬಾ ಪ್ರೀತಿಸುವ ರೋಹಿತ್ ಎರಡು ವಿಚಾರಗಳಲ್ಲಿ ಆಕೆಗೆ ತುಂಬಾ ಸಿಟ್ಟು ತರಿಸುತ್ತಾರಂತೆ. ಅದು ಯಾವುದು ಎಂದು ಅವರು ಮಯಾಂಕ್ ಅಗರ್ವಾಲ್ ಜತೆಗಿನ ಚ್ಯಾಟ್ ವೇಳೆ ಬಹಿರಂಗಪಡಿಸಿದ್ದಾರೆ.


ರೋಹಿತ್ ಗೆ ಏನಾದರೂ ಮನೆಗೆ ಬೇಕಾದ ಸಾಮಾನಿನ ಪಟ್ಟಿ ಮಾಡಿ ಮಾರ್ಕೆಟ್ ನಿಂದ ತರಲು ಹೇಳಿದರೆ ರೋಹಿತ್ ಅದನ್ನು ಮರೆತು ಬಿಡುತ್ತಾರಂತೆ. ಇದೇ ಕಾರಣಕ್ಕೆ ಪತ್ನಿಯಿಂದ ಬೈಸಿಕೊಳ್ಳುವುದು ಬೇಡವೆಂದು ನಾವು ಮನೆಗೆ ತರಿಸಿಕೊಳ್ಳೋಣ ಎಂದು ಪಟ್ಟಿ ಕೇಳುತ್ತಾರಂತೆ. ಇದು ರಿತಿಕಾಗೆ ಸಿಟ್ಟು ತರಿಸುವ ಮೊದಲ ಸಂಗತಿ.

ಎರಡನೆಯದಾಗಿ, ರೋಹಿತ್ ಗೆ ಉಗುರು ಕಡಿಯುವ ಅಭ್ಯಾಸವಿದೆ. ಇದು ರಿತಿಕಾಗೆ ಇಷ್ಟವೇ ಇಲ್ಲವಂತೆ. ಈಗ ಬೈಸಿಕೊಂಡು ಆದಷ್ಟು ಕಡಿಮೆ ಮಾಡಿದ್ದೇನೆ ಎಂದಿದ್ದಾರೆ ರೋಹಿತ್.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಮುಖ್ಯಸ್ಥ ಹುದ್ದೆಗೆ ಸೌರವ್ ಗಂಗೂಲಿ ಸ್ಪರ್ಧೆ ಸಾಧ್ಯತೆ: ಪಾಕ್ ಕ್ರಿಕೆಟಿಗನಿಂದಲೂ ಬೆಂಬಲ