Publish Date: Thu, 04 Jun 2020 (10:20 IST)
Updated Date: Thu, 04 Jun 2020 (10:23 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ರೋಹಿತ್ ಶರ್ಮಾ ಪ್ರಾಣಿ ಪ್ರಿಯ. ಅವರು ಆಗಾಗ ವನ್ಯ ಜೀವಿಗಳ ಬಗ್ಗೆ ತಮ್ಮ ಕಾಳಜಿ ಹೊರಹಾಕುತ್ತಲೇ ಇರುತ್ತಾರೆ. ಇದೀಗ ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಹತ್ಯೆ ಪ್ರಕರಣದ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ತುಂಬಾ ಅನಾಗರಿಕರು. ನಾವು ಪಾಠ ಕಲಿಯುವುದೇ ಇಲ್ಲ ಎಂದು ರೋಹಿತ್ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕೇರಳದಲ್ಲಿ ನಡೆದ ಘಟನೆ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಯಾವುದೇ ಪ್ರಾಣಿಯನ್ನೂ ಇಷ್ಟು ಕ್ರೂರವಾಗಿ ನಡೆಸಿಕೊಳ್ಳಬಾರದು ಎಂದು ರೋಹಿತ್ ಬೇಸರಿಂದಲೇ ಟ್ವೀಟ್ ಮಾಡಿದ್ದಾರೆ.