ನವದೆಹಲಿ: ಧೋನಿ ಕ್ರಿಕೆಟ್ ಗೆ ಮರಳುತ್ತಾರೋ ಬಿಡುತ್ತಾರೋ ಆದರೆ ಟೀಂ ಇಂಡಿಯಾ ಕ್ರಿಕೆಟಿಗರು ಮಾತ್ರ ಪ್ರತಿನಿತ್ಯವೂ ಅವರನ್ನು ನೆನೆಸಿಕೊಳ್ಳುತ್ತಾರೆ.
									
										
								
																	
ಇದೀಗ ಮೊಹಮ್ಮದ್ ಶಮಿ ತಾವು ಧೋನಿಯನ್ನು ತಂಡದಲ್ಲಿ ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಧೋನಿ ಎಲ್ಲರೊಡನೆ ಬೆರೆಯುವ ರೀತಿ.
									
			
			 
 			
 
 			
			                     
							
							
			        							
								
																	‘ಅವರು ಪ್ರತಿಯೊಬ್ಬ ಆಟಗಾರರನ್ನು ಡ್ರೆಸ್ಸಿಂಗ್ ರೂಂನಲ್ಲಿ ನಡೆಸಿಕೊಳ್ಳುವ ರೀತಿ ನೋಡಿದರೆ ಅವರು ಅಷ್ಟು ದೊಡ್ಡ ಆಟಗಾರ ಎನಿಸುವುದೇ ಇಲ್ಲ. ಯಾರೊಂದಿಗೇ ಆದರೂ ಹಿಂಜರಿಕೆಯಿಲ್ಲದೇ ಊಟಕ್ಕೆ ಕೂರುತ್ತಾರೆ. ರಾತ್ರಿ ಎಷ್ಟು ಹೊತ್ತುವರೆಗೂ ಮಾತನಾಡಬಹುದಿತ್ತು. ಎಲ್ಲರ ಜತೆಗೆ ತಮಾಷೆ ಮಾಡಿಕೊಂಡು ಎಂಜಾಯ್ ಮಾಡಿಕೊಂಡು ಇರುತ್ತಿದ್ದರು. ಆ ಕಾರಣಕ್ಕೆ ಅವರನ್ನು ಮಿಸ್ ಮಾಡುತ್ತಿದ್ದೇವೆ’ ಎಂದು ಶಮಿ ಹೇಳಿಕೊಂಡಿದ್ದಾರೆ.