Publish Date: Tue, 02 Jun 2020 (11:10 IST)
Updated Date: Tue, 02 Jun 2020 (11:13 IST)
ಬೆಂಗಳೂರು: ಕ್ರಿಕೆಟ್ ಗೆ ಮರಳಲು ಕಾತುರದಿಂದ ಕಾಯುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಜೂನ್ ಅಂತ್ಯದ ವೇಳೆಗೆ ಪ್ರತ್ಯೇಕತಾ ಕ್ಯಾಂಪ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಮಾಡಲು ಈಗಾಗಲೇ ಲಂಕಾ ಮಂಡಳಿಯಿಂದ ಆಹ್ವಾನ ಬಂದಿದೆ. ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸ ನಿಗದಿಯಾಗಿದೆ. ಇದರ ನಡುವೆ ಐಪಿಎಲ್ ಆಯೋಜಿಸುವ ಬಗ್ಗೆಯೂ ಮಾತುಕತೆಯಾಗುತ್ತಿದೆ.
ಈ ಹಿನ್ನಲೆಯಲ್ಲಿ ಹಲವು ದಿನಗಳಿಂದ ಕ್ರಿಕೆಟ್ ನಿಂದ ದೂರವುಳಿದಿದ್ದ ಕ್ರಿಕೆಟಿಗರಿಗೆ ಅಭ್ಯಾಸಕ್ಕೆ ಮರಳುವುದು ಅನಿವಾರ್ಯವಾಗಿದೆ. ಈಗಾಗಲೇ ಸರ್ಕಾರವೂ ಕ್ರೀಡಾ ಚಟುವಟಿಕೆಗಳಿಗೆ ಹಸಿರು ನಿಶಾನೆ ತೋರಿರುವುದರಿಂದ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ತಯಾರು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.