Publish Date: Mon, 01 Jun 2020 (10:51 IST)
Updated Date: Mon, 01 Jun 2020 (10:53 IST)
ಮುಂಬೈ: ಪ್ರತಿಷ್ಠಿತ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿಗೆ ತಮ್ಮ ಹೆಸರನ್ನು ಬಿಸಿಸಿಐ ಶಿಫಾರಸ್ಸು ಮಾಡಿರುವುದರ ಬಗ್ಗೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಬಿಸಿಸಿಐ ತಮ್ಮ ಹೆಸರು ಶಿಫಾರಸ್ಸು ಮಾಡಿರುವುದು ತಮಗೆ ಗೌರವ ಮತ್ತು ಹೆಮ್ಮೆಯ ವಿಚಾರ ಎಂದು ರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದಲ್ಲದೆ, ಅರ್ಜುನ ಪ್ರಶಸ್ತಿಗೆ ಇಶಾಂತ್ ಶರ್ಮಾ, ಶಿಖರ್ ಧವನ್ ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿ ದೀಪ್ತಿ ಶರ್ಮಾ ಹೆಸರುಗಳನ್ನು ಬಿಸಿಸಿಐ ಶಿಫಾರಸ್ಸು ಮಾಡಿದೆ.