Publish Date: Fri, 12 Jun 2020 (09:43 IST)
Updated Date: Fri, 12 Jun 2020 (09:44 IST)
ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ಗೆ ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಆಡದೇ ಬೇಸರವಾಗಿದೆಯಂತೆ. ಇದನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ತಮ್ಮ ಹಳೆಯ ಆಟದ ವಿಡಿಯೋ ಒಂದನ್ನು ಪ್ರಕಟಿಸಿರುವ ರೋಹಿತ್ ಅದರಲ್ಲಿ ಸಿಕ್ಸರ್, ಬೌಂಡರಿಗಳನ್ನು ಹೊಡೆಯುವುದನ್ನು ತೋರಿಸಿ ಇದನ್ನೆಲ್ಲಾ ನಾನೀಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬೇಸರಿಂದಲೇ ಬರೆದುಕೊಂಡಿದ್ದಾರೆ.
ಅವರು ಮಾತ್ರವಲ್ಲ, ಅವರ ಅಭಿಮಾನಿಗಳೂ ಈ ರಸದೌತಣವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೇಗ ಕೊರೋನಾ ಭೀತಿ ಮುಗಿದು ಕ್ರಿಕೆಟ್ ಮರಳಿ ಆರಂಭವಾಗಲಿ ಎಂದು ಅಭಿಮಾನಿಗಳೂ ಆಶಿಸಿದ್ದಾರೆ.