Select Your Language

Notifications

webdunia
webdunia
webdunia
webdunia

ಐಪಿಎಲ್ ನಡೆಸುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೌರವ್ ಗಂಗೂಲಿ

ಐಪಿಎಲ್ ನಡೆಸುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೌರವ್ ಗಂಗೂಲಿ
ಮುಂಬೈ , ಗುರುವಾರ, 11 ಜೂನ್ 2020 (10:21 IST)
ಮುಂಬೈ: ಕೊರೋನಾದಿಂದಾಗಿ ಅನಿಶ್ಚಿತತೆಯಲ್ಲಿರುವ ಈ ವರ್ಷದ ಐಪಿಎಲ್ ಆವೃತ್ತಿ ನಡೆಸುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹತ್ವದ ಹೇಳಿಕೆ ನೀಡಿದ್ದಾರೆ.


ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಗಂಗೂಲಿ ಸಾಧ‍್ಯವಾದರೆ ಖಾಲಿ ಮೈದಾನದಲ್ಲಾದರೂ ಐಪಿಎಲ್ ಆಯೋಜಿಸಲು ನಾವು ರೆಡಿ ಎಂದಿದ್ದಾರೆ. ಈಗಾಗಲೇ ಕೇಂದ್ರ ಕೂಡಾ ಖಾಲಿ ಮೈದಾನದಲ್ಲಿ ಕ್ರೀಡಾಕೂಟ ನಡೆಸುವುದಕ್ಕೆ ಅನುಮತಿ ನೀಡಿದೆ.

ಹೀಗಾಗಿ ಬಿಸಿಸಿಐ ಈಗ ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಹುಡುಕಾಡುತ್ತಿದೆ. ಮುಚ್ಚಿದ ಮೈದಾನದಲ್ಲಾದರೂ ಸರಿಯೇ ಐಪಿಎಲ್ ನಡೆಸಲು ಫ್ರಾಂಚೈಸಿಗಳು, ಪ್ರಸಾರ ಸಂಸ್ಥೆಗಳು, ಜಾಹೀರಾತುದಾರರು, ಅಭಿಮಾನಿಗಳು ಐಪಿಎಲ್ ನಡೆಯುವುದನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಇದಕ್ಕೆ ತಯಾರಿ ನಡೆಸಲಾಗುತ್ತಿದೆ ಎಂದಿದ್ದಾರೆ ಗಂಗೂಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ ನಲ್ಲಿ ಲಂಕಾ ಪ್ರವಾಸ ಮಾಡಲು ಒಪ್ಪಿಕೊಂಡ ಟೀಂ ಇಂಡಿಯಾ?