ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಲೀಗ್ ನಲ್ಲಿ ಭಾರತದ ಐಪಿಎಲ್ ಗಿಂತ ಬೌಲಿಂಗ್ ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಪಾಕ್ ಮಾಜಿ ವೇಗಿ ವಾಸಿಂ ಅಕ್ರಂ ಹೇಳಿಕೊಂಡಿದ್ದಾರೆ.
ಈ ಹಿಂದೆ ಐಪಿಎಲ್ ನಲ್ಲೂ ಅಕ್ರಂ ಕೋಲ್ಕೊತ್ತಾ ತಂಡದ ಪರ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಈಗ ಪಿಎಸ್ ಎಲ್ ನಲ್ಲೂ ಪಾಲ್ಗೊಳ್ಳುತ್ತಿದ್ದಾರೆ.
ಹೀಗಾಗಿ ಪಿಎಸ್ ಎಲ್ ನಲ್ಲಿ ಪಾಲ್ಗೊಳ್ಳುವ ವಿದೇಶೀ ಆಟಗಾರರೊಂದಿಗೆ ಚರ್ಚಿಸುವಾಗ ಅವರೆಲ್ಲರೂ ಇದೇ ಅಭಿಪ್ರಾಯ ಹೇಳುತ್ತಾರೆ ಎಂದಿದ್ದಾರೆ ಅಕ್ರಂ. ಐಪಿಎಲ್ ಗೂ ಪಿಎಸ್ ಎಲ್ ಕ್ರಿಕೆಟ್ ಟೂರ್ನಿಗೂ ಇರುವ ವ್ಯತ್ಯಾಸವೇನು ಎಂದು ವಿದೇಶೀ ಆಟಗಾರರಿಗೆ ಕೇಳಿದರೆ ಅವರು ಪಿಎಸ್ ಎಲ್ ನಲ್ಲಿ ಬೌಲಿಂಗ್ ಗುಣಮಟ್ಟ ಚೆನ್ನಾಗಿರುತ್ತದೆ ಎಂದಿದ್ದಾರೆ ಎಂದು ಅಕ್ರಂ ಹೇಳಿಕೊಂಡಿದ್ದಾರೆ.