Publish Date: Thu, 11 Jun 2020 (10:00 IST)
Updated Date: Thu, 11 Jun 2020 (10:02 IST)
ಮುಂಬೈ: ಕೊರೋನಾ ಬಳಿಕ ಕ್ರಿಕೆಟ್ ಸರಣಿ ಯಾವಾಗ ಎಂದು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಟೀಂ ಇಂಡಿಯಾ ಕಡೆಯಿಂದ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ.
ಮುಂಬರುವ ಆಗಸ್ಟ್ ನಲ್ಲಿ ಸೀಮಿತ ಓವರ್ ಗಳ ಪಂದ್ಯವಾಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಆಹ್ವಾನವಿತ್ತಿತ್ತು. ಆ ಪ್ರವಾಸದ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಹೇಳಿಕೆ ನೀಡಿರಲಿಲ್ಲ.
ಆದರೆ ಈಗ ಮೂಲಗಳ ಪ್ರಕಾರ ಆಗಸ್ಟ್ ನಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಭಾರತ ಲಂಕಾ ಪ್ರವಾಸ ಮಾಡಲು ಒಪ್ಪಿಗೆ ನೀಡಬಹುದು ಎಂಬ ಸುದ್ದಿ ಹರಡಿದೆ. ಆಗಸ್ಟ್ ವೇಳೆಗೆ ವಿದೇಶ ಪ್ರವಾಸಕ್ಕೆ ಇರುವ ನಿರ್ಬಂಧ ತೆರವಾಗುವ ನಿರೀಕ್ಷೆಯಿದೆ. ಹೀಗಾಗಿ ಆ ವೇಳೆಗೆ ಕ್ರಿಕೆಟ್ ಸರಣಿ ಆಯೋಜಿಸಬಹುದು ಎಂಬ ವಿಶ್ವಾಸದಲ್ಲಿ ಲಂಕಾ ಮಂಡಳಿಯಿದೆ.