Publish Date: Sat, 13 Jun 2020 (09:32 IST)
Updated Date: Sat, 13 Jun 2020 (09:35 IST)
ಸಿಡ್ನಿ: ಈ ವರ್ಷ ಅಕ್ಟೋಬರ್ ಬಳಿಕ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಖಾಲಿ ಮೈದಾನದಲ್ಲಿ ಆಡುವ ಸಾಧ‍್ಯತೆ ಕಡಿಮೆ ಎನ್ನಲಾಗಿದೆ.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ 40 ಸಾವಿರ ಸಾಮರ್ಥ್ಯವುಳ್ಳ ಮೈದಾನದಲ್ಲಿ 10 ಸಾವಿರ ಮಂದಿಗೆ ಅವಕಾಶ ನೀಡಿ ಕ್ರೀಡಾಕೂಟ ಆಯೋಜಿಸಬಹುದು ಎಂಬ ಹೊಸ ನಿಯಮ ಘೋಷಿಸಿದ್ದಾರೆ.
ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ತುಂಬಿದ ಮೈದಾನವಲ್ಲದಿದ್ದರೂ ಟೀಂ ಇಂಡಿಯಾಕ್ಕೆ ಖಾಲಿ ಮೈದಾನದಲ್ಲಿ ಆಡುವ ಪರಿಸ್ಥಿತಿ ಬರದು ಎನ್ನಲಾಗಿದೆ.