Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಲ್ಲ: ಬಿಸಿಸಿಐ ಸ್ಪಷ್ಟನೆ

ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಲ್ಲ: ಬಿಸಿಸಿಐ ಸ್ಪಷ್ಟನೆ
ಮುಂಬೈ , ಶನಿವಾರ, 13 ಜೂನ್ 2020 (09:22 IST)
ಮುಂಬೈ: ಟೀಂ ಇಂಡಿಯಾ ಜೂನ್ ಅಂತ್ಯದ ವೇಳೆಗೆ ಶ್ರೀಲಂಕಾ ಪ್ರವಾಸ ಮಾಡುವ ಕುರಿತಂತೆ ಬಿಸಿಸಿಐ ತನ್ನ ಸ್ಪಷ್ಟ ನಿರ್ಧಾರ ಪ್ರಕಟಿಸಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದೆ.


ಲಂಕಾ ಕ್ರಿಕೆಟ್ ಮಂಡಳಿ ಜುಲೈ ಅಂತ್ಯದ ವೇಳೆಗೆ ತಮ್ಮ ದೇಶಕ್ಕೆ ಸೀಮಿತ ಓವರ್ ಗಳ ಸರಣಿ ಆಡಲು ಬಿಸಿಸಿಐಗೆ ಆಹ್ವಾನ ಕಳುಹಿಸಿತ್ತು. ಆದರೆ ಇದಕ್ಕೆ ಇದೀಗ ಪ್ರತಿಕ್ರಿಯಿಸಿರುವ ಬಿಸಿಸಿಐ ಕೊರೋನಾ ಪರಿಸ್ಥಿತಿ ಸುಧಾರಿಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಸದ್ಯಕ್ಕೆ ಲಂಕಾ ಮತ್ತು ಜಿಂಬಾಬ್ವೆಗೆ ಕ್ರಿಕೆಟ್ ಸರಣಿ ಆಡಲು ತೆರಳಲ್ಲ ಎಂದು ಸ್ಪಷ್ಟನೆ ನೀಡಿದೆ.

ಅವಸರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿ ಆಟಗಾರರ ಜೀವವನ್ನು ಅಪಾಯಕ್ಕೊಡ್ಡುವ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಬಿಸಿಸಿಐ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಆಯೋಜಿಸಲು ಐಸಿಸಿಯ ಆ ಒಂದು ಘೋಷಣೆಗೆ ಕಾಯುತ್ತಿರುವ ಬಿಸಿಸಿಐ