Publish Date: Fri, 12 Jun 2020 (10:02 IST)
Updated Date: Fri, 12 Jun 2020 (10:10 IST)
ಮುಂಬೈ: ಈ ವರ್ಷದ ಐಪಿಎಲ್ ನಿಗದಿತ ಸಮಯದಲ್ಲಿ ನಡೆಯಲು ಕೊರೋನಾ ಅಡ್ಡಿಯಾಗಿತ್ತು. ಆದರೆ ಆವೃತ್ತಿ ನಡೆಯದೇ ಹೋದರೆ ಫ್ರಾಂಚೈಸಿಗಳಿಗೆ ಬಿಸಿಸಿಐಗೆ, ಆಟಗಾರರಿಗೆ ಎಲ್ಲರಿಗೂ ನಷ್ಟವಾಗಲಿದೆ. ಹೀಗಾಗಿ ಬಿಸಿಸಿಐ ಉಪಾಯವೊಂದನ್ನು ಕಂಡುಕೊಂಡಿದೆ.
ಒಂದು ವೇಳೆ ಅಕ್ಟೋಬರ್-ನವಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ರದ್ದಾದರೆ ಅದೇ ಸಮಯವನ್ನು ಐಪಿಎಲ್ ಗೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಬಿಸಿಸಿಐದ್ದು. ಆದರೆ ಐಸಿಸಿ ಮೊನ್ನೆ ನಡೆದ ಸಭೆಯಲ್ಲೂ ಟಿ20 ವಿಶ್ವಕಪ್ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಬದಲಾಗಿ ಜುಲೈಗೆ ನಿರ್ಧಾರ ಪ್ರಕಟಿಸುವ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಐಸಿಸಿ ಪ್ರಕಟಿಸುವ ಆ ಒಂದು ನಿರ್ಧಾರದ ಮೇಲೆ ಐಪಿಎಲ್ ಭವಿಷ್ಯ ಅಡಗಿದೆ.