Publish Date: Sat, 19 Aug 2017 (09:02 IST)
Updated Date: Sat, 19 Aug 2017 (09:07 IST)
ಕೊಲೊಂಬೊ: ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಇಬ್ಬರೂ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುತ್ತಿದ್ದ ಕರ್ನಾಟಕದ ಜೋಡಿ. ಆದರೆ ಇದೀಗ ರಾಹುಲ್ ಗಾಗಿ ಪಾಂಡೆ ತಮ್ಮ ಸ್ಥಾನ ಬಿಟ್ಟುಕೊಡಬೇಕಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಖಾಯಂ ಓಪನರ್ ಶಿಖರ್ ಧವನ್ ಗಾಗಿ ಆರಂಭಿಕ ಸ್ಥಾನ ಬಿಟ್ಟುಕೊಡಬೇಕಿದೆ. ಹಾಗಂತ ಅತ್ಯುತ್ತಮ ಫಾರ್ಮ್ ನಲ್ಲಿರುವ ರಾಹುಲ್ ರನ್ನು ತಂಡದಿಂದ ಕೈಬಿಡುವಂತಿಲ್ಲ.
ಹೀಗಾಗಿ ಧವನ್-ರೋಹಿತ್ ಶರ್ಮಾ ಆರಂಭಿಕರಾದರೆ, ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ನಿಶ್ಚಿತ. ಇದರಿಂದಾಗಿ ಮನೀಶ್ ಪಾಂಡೆ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗಿದ್ದು, ಒಬ್ಬ ಕನ್ನಡಿಗನಿಗಾಗಿ ಇನ್ನೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಬೆಂಚ್ ಕಾಯಿಸುವುದು ಅನಿವಾರ್ಯವಾಗಿದೆ.