Publish Date: Fri, 18 Aug 2017 (12:01 IST)
Updated Date: Fri, 18 Aug 2017 (12:04 IST)
ಕೊಲೊಂಬೊ: ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಹಿರಿಯ ಆಟಗಾರರ ವಿರುದ್ಧ ಹೊಸದೊಂದು ಆರೋಪ ಮಾಡಿದ್ದಾರೆ.
ಡ್ರೆಸ್ಸಿಂಗ್ ರೂಂ ನಲ್ಲಿ ಹಿರಿಯ ಆಟಗಾರರು ತನಗೆ ಬೈತಿರ್ತಾರೆ, ನನ್ನ ಕಾಲೆಳಿತಾರೆ ಎಂದು ರಾಹುಲ್ ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
ಆದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ರಾಹುಲ್ ಹೀಗಂತ ಹೇಳಿರುವುದು ತಮಾಷೆಗೆ. ರಾಹುಲ್ ರನ್ನು ಸಹ ಆಟಗಾರ ಪೂಜಾರ ಸಂದರ್ಶಿಸುವಾಗ ಅವರು ಹಿರಿಯರ ಮೇಲೆ ಇಂತಹದ್ದೊಂದು ಹುಸಿ ಆರೋಪ ಮಾಡಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಿನ್ನ ಹೆಜ್ಜೆ ಗುರುತು ಅಳಿಯೋದೇ ಇಲ್ಲ ಎಂದು ಕಾಲೆಳೆಯುತ್ತಾರೆ. ನಾನು ಆಗಾಗ ಗಾಯಗೊಂಡು ಪುನಶ್ಚೇತನ ಕಾರ್ಯಕ್ಕೆ ಇಲ್ಲಿಗೆ ಬರುವಂತಾಗುವುದು ವಿಪರ್ಯಾಸ. ಆದರೆ ಅದಕ್ಕೇ ಸೀನಿಯರ್ಸ್ ನನ್ನ ಕಾಲೆಳಿತಾರೆ ಎಂದು ರಾಹುಲ್ ಹೇಳಿದ್ದಾರೆ.
ಅಷ್ಟೇ ಅಲ್ಲ, ಈ ನಡುವೆ ರಾಹುಲ್ ರನ್ನು ಸಮಾಧಾನಿಸಲು ಪೂಜಾರ, ‘ನಾನು ಮಾತ್ರವಲ್ಲ, ಮುರಳಿ ವಿಜಯ್ ಕೂಡಾ ಹೇಳುತ್ತಾರೆ, ರಾಹುಲ್ ಶಾರ್ಟ್ ಲೆಗ್ ನಲ್ಲಿ ಉತ್ತಮ ಫೀಲ್ಡರ್’ ಎಂದು ಬೆನ್ನುತಟ್ಟಿದರು. ಅದಕ್ಕೆ ನಗುತ್ತಲೇ ಉತ್ತರಿಸಿದ ರಾಹುಲ್ ‘ನೋಡಿ ಇಲ್ಲಿಯೇ ಇದೆ ಪುರಾವೆ. ತಂಡದಲ್ಲಿ ಸೀನಿಯರ್ಸ್, ಜ್ಯೂನಿಯರ್ಸ್ ಎಂದೆಲ್ಲಾ ತಾರತಮ್ಯವಿದೆ ಎಂದರು.