Daily Horoscope

Select Your Language

Notifications

webdunia
webdunia
webdunia
webdunia

ಲಂಕಾ ವಿಮಾನ ಹತ್ತುವ ಮೊದಲು ಕೋಚ್ ಗಳಿಗೆ ಕ್ಲಾಸ್ ತೆಗೆದುಕೊಂಡ ಧೋನಿ

ಧೋನಿ
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಮತ್ತು ಕೇದಾರ್ ಜಾದವ್ ಶ್ರೀಲಂಕಾಗೆ ಏಕದಿನ ಸರಣಿಗಾಗಿ ವಿಮಾನ ಹತ್ತುವ ಮೊದಲು ಕೋಚ್ ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

 
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಧೋನಿ ಮತ್ತು ಜಾದವ್ ಇಲ್ಲಿನ ಸ್ಥಳೀಯ ಕೋಚ್ ಗಳ ಸಭೆಯಲ್ಲಿ ಮಾತನಾಡಿದ್ದಾರೆ.

ಕೋಚ್ ಮತ್ತು ಆಟಗಾರರ ನಡುವಿನ ಬಾಂಧವ್ಯ ಹೇಗಿರಬೇಕು ಎಂಬುದರ ಬಗ್ಗೆ ಧೋನಿ ಸುಮಾರು ಅರ್ಧಗಂಟೆ ಭಾಷಣ ಮಾಡಿದ್ದಾರೆ. ಸಭೆಯಲ್ಲಿ ಸುನಿಲ್ ಜೋಶಿ, ವಿಜಯ್ ಭಾರಧ್ವಾಜ್ ರಂತಹ ಸ್ಥಳೀಯ ಕೋಚ್ ಗಳಲ್ಲದೆ, ಆಸ್ಟ್ರೇಲಿಯಾದ ಜೇಸನ್ ಗಿಲೆಸ್ಪಿ ಮೊದಲಾದವರೂ ಇದ್ದರು.

ಇಲ್ಲಿ ತರಬೇತಿಯಲ್ಲಿ ನಿರತರಾಗಿದ್ದ ಧೋನಿ ಮತ್ತು ಜಾದವ್ ರನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಲು ಕರೆಸಲಾಗಿತ್ತು. ಇದರ ಬಳಿಕ ಧೋನಿ ಮತ್ತು ಜಾದವ್ ಲಂಕಾ ಸರಣಿಗಾಗಿ ವಿಮಾನ ಹತ್ತಿದ್ದಾರೆ.

ಇದನ್ನೂ ಓದಿ.. ಭಾರತೀಯರ ಅಣಕವಾಡಿದ ಚೀನಾ ಮಾಧ್ಯಮ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೊಯೇಬ್ ಅಖ್ತರ್ ಪ್ರಕಾರ ಈ ಭಾರತೀಯ ವಿನಯವಂತ!