Publish Date: Fri, 18 Aug 2017 (08:43 IST)
Updated Date: Fri, 18 Aug 2017 (08:47 IST)
ನವದೆಹಲಿ: ಟೀಂ ಇಂಡಿಯಾ ನಾಯಕ ಕೊಹ್ಲಿಯ ಆಕ್ರಮಣಕಾರಿ ಸ್ವಭಾವ, ಮೈದಾನದಲ್ಲಿ ಭಾವನೆಗಳನ್ನು ತೋರ್ಪಡಿಸುವ ಸ್ವಭಾವ ನೋಡಿದರೆ ಅವರು ಪಕ್ಕಾ ಆಸ್ಟ್ರೇಲಿಯನ್ ನಂತೆ ತೋರುತ್ತಾರಂತೆ.
ಹಾಗಂತ ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ. ಕೊಹ್ಲಿಯ ನಾಯಕತ್ವದ ಶೈಲಿ ಆಸ್ಟ್ರೇಲಿಯಾದ ಯಶಸ್ವೀ ನಾಯಕ ರಿಕಿ ಪಾಂಟಿಂಗ್ ರನ್ನೇ ಹೋಲುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಅವರ ನಾಯಕತ್ವದ ಶೈಲಿ ನನಗೆ ಇಷ್ಟ. ಅವರ ಸ್ಪರ್ಧಾತ್ಮಕ ಮನೋಭಾವ, ಆಕ್ರಮಣಶಾಲಿ ಸ್ವಭಾವ, ಗೆಲುವಿನ ಹಸಿವು ನನಗೆ ರಿಕಿ ಪಾಂಟಿಂಗ್ ರನ್ನೇ ನೆನಪಿಸುತ್ತದೆ’ ಎಂದು ಕ್ಲಾರ್ಕ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ