Select Your Language

Notifications

webdunia
webdunia
webdunia
webdunia

ಭಾರತ ಪ್ರವಾಸ ಮಾಡಲಿರುವ ಆಸೀಸ್ ಕ್ರಿಕೆಟ್ ತಂಡಕ್ಕೆ ಶಾಕ್

ಭಾರತ ಪ್ರವಾಸ ಮಾಡಲಿರುವ ಆಸೀಸ್ ಕ್ರಿಕೆಟ್ ತಂಡಕ್ಕೆ ಶಾಕ್
ಸಿಡ್ನಿ , ಶನಿವಾರ, 19 ಆಗಸ್ಟ್ 2017 (08:29 IST)
ಸಿಡ್ನಿ: ಶ್ರೀಲಂಕಾ ವಿರುದ್ಧ ನಿಗದಿತ  ಓವರ್ ಗಳ ಸರಣಿ ಮುಗಿದ ಮೇಲೆ ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ-20 ಸರಣಿ ಆಡಲಿದೆ.

 
ಆದರೆ ಭಾರತ ಸರಣಿಗೆ ಆಡಲು ಬರಲಿರುವ ಆಸ್ಟ್ರೇಲಿಯಾ ತಂಡ ಸದ್ಯಕ್ಕೆ ಸಂಕಷ್ಟದಲ್ಲಿದೆ. ಅದಕ್ಕೆ ಕಾರಣ ಗಾಯದ ಸಮಸ್ಯೆ.

ಈಗಷ್ಟೇ ಆಟಗಾರರ ವೇತನ ಗುತ್ತಿಗೆ ವಿವಾದ ಸುಖಾಂತ್ಯ ಕಂಡಿತು ಎನ್ನುವಾಗಲೇ ಪ್ರಮುಖ ಆಟಗಾರರು ಗಾಯಗೊಂಡು ಮೂಲೆ ಸೇರಿರುವುದು ಆಸ್ಟ್ರೇಲಿಯಾಗೆ ಶಾಕ್ ನೀಡಿದೆ. ಪ್ರಮುಖ ಆಟಗಾರರಾದ ಕ್ರಿಸ್ ಲಿನ್, ಮಿಚೆಲ್ ಸ್ಟಾರ್ಕ್, ಜಾನ್ ಹೇಸ್ಟಿಂಗ್ಸ್ ಗಾಯಗೊಂಡು ವಿಶ್ರಾಂತಿಯಲ್ಲಿರುವುದರಿಂದ ಭಾರತ ಪ್ರವಾಸ ಮಿಸ್ ಮಾಡಿಕೊಳ್ಳಲಿದ್ದಾರೆ.

ಉಳಿದಂತೆ ಸ್ಟೀವ್ ಸ್ಮಿತ್ ರನ್ನು ಎರಡೂ ಮಾದರಿಯ ಸರಣಿಗೆ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಡೇವಿಡ್ ವಾರ್ನರ್, ಪ್ಯಾಟ್ ಕ್ಯುಮಿನ್ಸ್ ರಂತಹ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.

ಇದನ್ನೂ ಓದಿ.. ಅನಿಲ್ ಕುಂಬ್ಳೆ ಅತಿಯಾಗಿ ಶಿಸ್ತು ತೋರುತ್ತಿರಲಿಲ್ಲ ಎಂದ ಟೀಂ ಇಂಡಿಯಾ ಕ್ರಿಕೆಟಿಗ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ಅತಿಯಾಗಿ ಶಿಸ್ತು ತೋರುತ್ತಿರಲಿಲ್ಲ ಎಂದ ಟೀಂ ಇಂಡಿಯಾ ಕ್ರಿಕೆಟಿಗ