Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆ ಅತಿಯಾಗಿ ಶಿಸ್ತು ತೋರುತ್ತಿರಲಿಲ್ಲ ಎಂದ ಟೀಂ ಇಂಡಿಯಾ ಕ್ರಿಕೆಟಿಗ

ವೃದ್ಧಿಮಾನ್ ಸಾಹಾ
ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅತಿಯಾಗಿ ಶಿಸ್ತಿನಿಂದ ವರ್ತಿಸುತ್ತಿದ್ದರು ಎಂಬ ಆರೋಪಗಳನ್ನು ಟೀಂ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಳ್ಳಿ ಹಾಕಿದ್ದಾರೆ.


 
ಅವರು ಅತಿಯಾಗಿ ಶಿಸ್ತು ತೋರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕ್ರಿಕೆಟ್ ವಿಷಯಕ್ಕೆ ಬಂದರೆ ಅವರು ಕಟ್ಟುನಿಟ್ಟಾಗಿದ್ದರು. ಆದರೆ ಅತಿ ಎನಿಸುವಷ್ಟು ಶಿಸ್ತು ತೋರುತ್ತಿರಲಿಲ್ಲ. ಕ್ರಿಕೆಟ್ ಹೊರತಾಗಿ ಅವರು ನಮ್ಮ ಬಳಿ ಸ್ನೇಹಿತನಂತೆ ಇದ್ದರು ಎಂದು ಸಹಾ ಅಭಿಪ್ರಾಯಪಟ್ಟಿದ್ದಾರೆ.

ಈ ವೇಳೆ ಕುಂಬ್ಳೆ ಮತ್ತು ರವಿ ಶಾಸ್ತ್ರಿ ಕೋಚಿಂಗ್ ಶೈಲಿಯಲ್ಲಿ ವ್ಯತ್ಯಾಸವೇನು ಎಂದು ಕೇಳಿದ್ದಕ್ಕೆ ‘ಅನಿಲ್ ಭಾಯ್ ಯಾವಾಗಲೂ ನಾವು 400-500 ರನ್ ಕಲೆ ಹಾಕಬೇಕು. ಎದುರಾಳಿಯನ್ನು 150-200 ರನ್ ಒಳಗೆ ಕಟ್ಟಿ ಹಾಕಬೇಕೆಂದು ನಿರೀಕ್ಷಿಸುತ್ತಿದ್ದರು.

ಆದರೆ ರವಿಶಾಸ್ತ್ರಿ  ಹಾಗಲ್ಲ. ಅವರು ಮೈದಾನಕ್ಕೆ ಇಳಿದ ಮೇಲೆ ಪ್ರತೀ ಬಾಲ್ ನ್ನು ಮೈದಾನದಿಂದ ಆಚೆ ಅಟ್ಟಿ, ಆಕ್ರಮಣಕಾರಿಯಾಗಿರಿ ಎನ್ನುತ್ತಾರೆ. ಅದರ ಹೊರತಾಗಿ ಇಬ್ಬರೂ ನಮ್ಮಲ್ಲಿ ಸಕಾರಾತ್ಮಕ ಅಂಶ ತುಂಬುತ್ತಾರೆ’ ಎಂದು ಸಹಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ಖ್ಯಾತ ಹಿನ್ನಲೆ ಗಾಯಕ ಎಲ್ ಎನ್  ಶಾಸ್ತ್ರಿಗೆ ಕ್ಯಾನ್ಸರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೀನಿಯರ್ಸ್ ನಂಗೆ ಬೈತಾರೆ ಎಂದ ಕೆಎಲ್ ರಾಹುಲ್!