Select Your Language

Notifications

webdunia
webdunia
webdunia
webdunia

ಕಿವೀಸ್ ವಿರುದ್ಧ ಟೂರ್ನಿಯಿಂದ ಹಿಂದೆ ಸರಿದ ಜುನೈದ್ ಖಾನ್; ಪಾಕ್ ಪಾಲಿಗೆ ಮತ್ತೊಂದು ಹಿನ್ನೆಡೆ!

ಕಿವೀಸ್ ವಿರುದ್ಧ ಟೂರ್ನಿಯಿಂದ ಹಿಂದೆ ಸರಿದ ಜುನೈದ್ ಖಾನ್; ಪಾಕ್ ಪಾಲಿಗೆ ಮತ್ತೊಂದು ಹಿನ್ನೆಡೆ!
ಕರಾಚಿ , ಶುಕ್ರವಾರ, 22 ಡಿಸೆಂಬರ್ 2017 (07:07 IST)
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಜುನೈದ್ ಖಾನ್ ಗಾಯಾದ ಸಮಸ್ಯೆಯ ಕಾರಣ ಕಿವೀಸ್ ವಿರುದ್ಧ ಟೂರ್ನಿಯಿಂದ ಹಿಂದೆ ಸರಿದಿದ್ದು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮತ್ತೊಂದು ಹಿನ್ನಡೆ ಅನುಭವಿಸಿದಂತಾಗಿದೆ.


ಜುನೈದ್ ಖಾನ್ ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಖುಲ್ನಾ ಟೈಟಾನ್ಸ್ ಪರ ಆಡುತ್ತಿದ್ದಾಗ ಗಾಯಗೊಂಡಿದ್ದು, ಪಾಕ್ ಗೆ ವಾಪಾಸ್ ಆದ ಮೇಲೆ ಕಾಲು ನೋವು ಕಾಣಿಸಿಕೊಂಡಿತ್ತು. ಸ್ಕ್ಯಾನಿಂಗ್ ನಿಂದ  ಅವರ  ಕಾಲಲ್ಲಿ ಗಾಯವಾಗಿರುವುದು ತಿಳಿದು, ವೈದ್ಯರು ನಾಲ್ಕು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನವಜೋಡಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ