Select Your Language

Notifications

webdunia
webdunia
webdunia
Sunday, 13 April 2025
webdunia

ನವಜೋಡಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ
ದೆಹಲಿ , ಶುಕ್ರವಾರ, 22 ಡಿಸೆಂಬರ್ 2017 (06:41 IST)
ದೆಹಲಿ: ಇಟಲಿಯಲ್ಲಿ ಮದುವೆಯಾದ ವಿರಾಟ್ ಹಾಗು ಅನುಷ್ಕಾ ಜೋಡಿ ಡಿ.21 ರಂದು ದೆಹಲಿಯಲ್ಲಿ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ, ಪ್ರಧಾನಿ ಮೋದಿ ಅವರು  ಬಂದು ಶುಭ ಹಾರೈಸಿದರು.


ಆರತಕ್ಷತೆ ಕಾರ್ಯಕ್ರಮ ಹೊಸದಿಲ್ಲಿಯ ಸರ್ದಾರ್ ಪಟೇಲ ರಸ್ತೆಯಲ್ಲಿರುವ ತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ಎಂಬ ಪಂಚತಾರಾ ಹೋಟೆಲ್ ನಲ್ಲಿ ಜರುಗಿತ್ತು. ವಿರಾಟ್ ಅವರು ಶೆರ್ವಾನಿ ಧರಿಸಿದರೆ, ಅನುಷ್ಕಾ ಅವರು ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.


ಡಿ 26 ರಂದು ಮುಂಬಯಿನಲ್ಲಿಕ್ರೀಡೆ ಹಾಗು ಸಿನಿಮಾ ಮಂದಿಗಾಗಿ ಇನ್ನೊಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅದು ಮುಗಿದ ಮೇಲೆ ಕೊಹ್ಲಿಯವರು ಕ್ರಿಕೆಟ್ ಸರಣಿ ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಗೆ ಮತ್ತಂದೂ ಗುಡ್ ನ್ಯೂಸ್