Select Your Language

Notifications

webdunia
webdunia
webdunia
webdunia

ಭಾನುವಾರ ರಜಾದಿನವಾಗಲು ಇವರ ಹೋರಾಟವೇ ಕಾರಣವಂತೆ! ಯಾರಿವರು ಗೊತ್ತಾ

ಭಾನುವಾರ ರಜಾದಿನವಾಗಲು ಇವರ ಹೋರಾಟವೇ ಕಾರಣವಂತೆ! ಯಾರಿವರು ಗೊತ್ತಾ
ಬೆಂಗಳೂರು , ಬುಧವಾರ, 20 ಡಿಸೆಂಬರ್ 2017 (08:08 IST)
ಬೆಂಗಳೂರು: ಭಾರತ ದೇಶದಲ್ಲಿ ಹೆಚ್ಚಿನ ಖಾಸಗಿ ಹಾಗೂ ಸರ್ಕಾರಿ ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಭಾನುವಾರ ರಜೆ ನೀಡಲಾಗುತ್ತದೆ. ವಾರದ ಏಳು ದಿನಗಳಲ್ಲಿ ಈ ದಿನವನ್ನೇ ರಜಾದಿನವೆಂದು ಘೋಷಿಸಲು ಕಾರಣ ಒಬ್ಬರು ಸ್ವಾತಂತ್ರ ಹೋರಾಟಗಾರು.


ಭಾರತ ದೇಶದಲ್ಲಿ ಭಾನುವಾರ ರಜಾ ಬರಲು ನಾರಾಯಣ ಮೇಘೂಜಿ ಲೌಖಂಡೆ ಅವರು ಕಾರಣವಂತೆ. ಮೊದಲು ಬ್ರಿಟಿಷರು ಭಾರತ ಪ್ರಜೆಗಳನ್ನು ವಾರದ ಏಳು ದಿನಗಳಲ್ಲೂ ದುಡಿಯಲು ಹೇಳುತ್ತಿದ್ದರಂತೆ. ಅದಕ್ಕಾಗಿ ನಾರಾಯಣ ಮೇಘೂಜಿ ಲೌಖಂಡೆ ಅವರು ಭಾನುವಾರ ಒಂದು ದಿನ ರಜೆ ನೀಡಬೇಕೆಂದು ಬ್ರಿಟಿಷರಲ್ಲಿ ಕೋರಿಕೆ ಸಲ್ಲಿಸಿದರು.

ಬ್ರಿಟಿಷರು ಅದನ್ನು ತಿರಸ್ಕರಿಸಿದಾಗ, ಅವರು 1881 ರಿಂದ 1889 ರ ವರೆಗೆ ಹೋರಾಟ ಮಾಡಿದರು. ಇದಕ್ಕೆ ಮಣಿದ ಆಂಗ್ಲರು 1889 ರಲ್ಲಿ ಭಾನುವಾರವನ್ನು ರಜಾ ದಿನವೆಂದು ಘೋಷಣೆ ಮಾಡಿದರು. ಅದಕ್ಕಾಗಿ ವಾರದಲ್ಲಿ ಒಂದು ದಿನ ರಜಾ ದಿನವನ್ನಾಗಿ ಮಾಡಿದ ನಾರಾಯಣ ಮೇಘೂಜಿ ಲೌಖಂಡೆ ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೈಟೆಕ್ ವೇಶ್ಯಾವಾಟಿಕೆ ಭೇದಿಸಿದ ಪೊಲೀಸರು