Publish Date: Tue, 12 Dec 2017 (08:41 IST)
Updated Date: Tue, 12 Dec 2017 (08:47 IST)
ಮನೆಹತ್ತಿರ ಬಂದು ಕಾಟಕೊಡುತ್ತಿದೆ ವ್ಯಕ್ತಿಯೊಬ್ಬ ಕೋತಿಯನ್ನು ಶೂಟ್ ಮಾಡಿ ಕೊಂದಿರುವ ಅಮಾನವೀಯ ಘಟನೆ ನಿಪ್ಪಾಣಿಯಲ್ಲಿ ನಡೆದಿದ್ದು, ಸ್ಥಳೀಯರು ಕೋತಿ ಮೃತದೇಹವನ್ನು ಪೊಲೀಸ್ ಠಾಣೆ ಎದುರಿಗೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ನಿಪ್ಪಾಣಿಯ ನಿಲೇಶ ಕುರುಬೆಟ್ಟ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಈ ಘಟನೆಯನ್ನು ಖಂಡಿಸಿರುವ ಸ್ಥಳೀಯರು ನಿಲೇಶ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸರು ಮಾತ್ರ ಪ್ರಕರಣ ದಾಖಲಿಸಿಕೊಳ್ಳದೆ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯವರು ಪ್ರಕರಣ ದಾಖಲಾದ ಬಳಿಕ ತಮ್ಮ ಸುಪರ್ದಿಗೆ ಪಡೆಯುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.