Select Your Language

Notifications

webdunia
webdunia
webdunia
webdunia

ಬ್ರಿಟನ್ ಬ್ರಿಟಿಷರ ರಾಷ್ಟ್ರದಂತೆ, ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ: ಭಾಗವತ್

Hindustan
ಮಧ್ಯಪ್ರದೇಶ , ಶನಿವಾರ, 28 ಅಕ್ಟೋಬರ್ 2017 (11:18 IST)
ಮಧ್ಯಪ್ರದೇಶ: ಹಿಂದೂಸ್ತಾನ್‌ ಹಿಂದೂಗಳ ರಾಷ್ಟ್ರ ಎಂದು ಆರ್‌ಎಸ್‌‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಇದರ ಅರ್ಥ ಹಿಂದೂಯೇತರರಿಗೆ ಅಲ್ಲ ಎಂದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂದೋರ್‌‌ ನಲ್ಲಿ ಆರ್‌ಎಸ್‌ಎಸ್‌ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಮೋಹನ್‌ ಭಾಗವತ್‌, ಜರ್ಮನ್‌ ಜರ್ಮನ್ನರ ರಾಷ್ಟ್ರ, ಬ್ರಿಟನ್‌ ಬ್ರಿಟಿಷರ ರಾಷ್ಟ್ರ, ಅಮೆರಿಕಾ ಅಮೆರಿಕನ್ನರ ರಾಷ್ಟ್ರ, ಅದೇ ರೀತಿ ಹಿಂದೂಸ್ತಾನ್‌ ಹಿಂದೂಗಳ ರಾಷ್ಟ್ರ. ಆದರೆ ಹಿಂದೂಸ್ತಾನ್‌ ಹಿಂದೂಯೇತರರಿಗೆ ಅಲ್ಲ ಎಂದು ಅರ್ಥವಲ್ಲ ಎಂದು ಮೋಹನ್‌ ಭಾಗವತ್‌ ತಿಳಿಸಿದ್ದಾರೆ.

ಹಿಂದೂ ಎಂಬ ಪದವು ಭಾರತ ಮಾತೆಯ ಎಲ್ಲಾ ಮಕ್ಕಳು, ಭಾರತೀಯ ಪೂರ್ವಜರ ವಂಶಸ್ಥರು ಹಾಗೂ ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ಎಲ್ಲರನ್ನೂ ಒಳಗೊಂಡಿದೆ ಎಂದು ಭಾಗವತ್‌ ಅಭಿಪ್ರಾಯ ಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ನೊಂದಿಗೆ ಶಿವಸೇನೆ ನಾಯಕರ ಮೃದುಧೋರಣೆ: ಬಿಜೆಪಿ ವಾಗ್ದಾಳಿ