Select Your Language

Notifications

webdunia
webdunia
webdunia
webdunia

ಇದು ಹಿಂದೂಸ್ತಾನ, ನನಗೆ ಕನ್ನಡ ಬೇಕಿಲ್ಲ’ ಎಂದ ಬ್ಯಾಂಕ್ ಅಕೌಂಟೆಂಟ್

ಇದು ಹಿಂದೂಸ್ತಾನ, ನನಗೆ ಕನ್ನಡ ಬೇಕಿಲ್ಲ’ ಎಂದ ಬ್ಯಾಂಕ್ ಅಕೌಂಟೆಂಟ್
ಮಂಡ್ಯ , ಶುಕ್ರವಾರ, 23 ಜೂನ್ 2017 (15:55 IST)
ಬೆಂಗಳೂರು ಮೆಟ್ರೋ ರೈಲಿನಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಕರ್ನಾಟಕದ ಗ್ರಾಮೀಣ ಭಾಗಕ್ಕೂ ಹಿಂದಿ ಹೇರಿಕೆ ಕಾಲಿಟ್ಟಿದೆ.

ಎಸ್`ಬಿಎಂ ನೌಕರನೊಬ್ಬ ನನಗೆ ಕನ್ನಡ ಬೇಕಾಗಿಲ್ಲ, ಇದು ಹಿಂದೂಸ್ಥಾನ ಎಂದು ಉದ್ಧಟತನ ತೋರಿರುವ ಘಟನೆ ಮಂಡ್ಯ ಜಿಲ್ಲೆಯ  ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ನಡೆದಿದೆ. ಬ್ಯಾಂಕ್`ನ ಅಕೌಂಟೆಂಟ್ ಕನ್ನಡದಲ್ಲಿ ಗ್ರಾಹಕರು ಮಾಹಿತಿ ಕೇಳಿದ್ದಕ್ಕೆ ಮಾಹಿತಿ ನೀಡಲು ನಿರಾಕರಿಸಿದ್ಧಾನೆ. ಇದು ಹಿಂದೂಸ್ಥಾನ ಕನ್ನಡ ನನಗೆ ಬೇಕಾಗಿಲ್ಲ, ಕನ್ನಡ ಕಲಿಯುವುದಿಲ್ಲ ಎಂದು ಹೇಳಿದ್ದಾನೆ.

ಎಸ್`ಬಿಎಂ ನೌಕರನ ವಿರುದ್ಧ ಸಾರ್ವಜನಿಕರು ಮತ್ತು ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ದಿನೇ ದಿನೇ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಏರಿಕೆ ತೀವ್ರಗೊಳಿಸಿರುವ ಕುರಿತೂ ಟೀಕೆ ಕೇಳಿಬಂದಿದೆ. ಈ ಮಧ್ಯೆ, ಇಂಗ್ಲೀಷ್ ಬಳಿಕ ಹಿಂದಿಯಲ್ಲೂ ಪಾಸ್ ಪೋರ್ಟ್ ವಿತರಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ನವದೆಹಲಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋಮಾಂಸ ಸಾಗಿಸುತ್ತಿದ್ದ ಆರೋಪ: ರೈಲಲ್ಲೇ ನಡಿತು ಮಾರಾಮಾರಿ: ಓರ್ವ ಸಾವು