ಚೆನ್ನೈ: ಹಾಟ್ ಸ್ಟಾರ್ ಆಪ್ ನಲ್ಲಿ ಪ್ರಸಾರವಾಗುವ ‘ರೋರ್ ಆಫ್ ದಿ ಲಯನ್’ ವೆಬ್ ಸೀರೀಸ್ ನಲ್ಲಿ 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುತ್ತಿಕೊಂಡ ಮ್ಯಾಚ್ ಫಿಕ್ಸಿಂಗ್ ವಿವಾದದ ಬಗ್ಗೆ ಧೋನಿ ಮಾತನಾಡಿದ್ದಾರೆ.
‘2013 ರಲ್ಲಿ ನಾನು ತುಂಬಾ ಖಿನ್ನತೆಗೊಳಗಾದೆ. ಮ್ಯಾಚ್ ಫಿಕ್ಸಿಂಗ್ ನಡೆದಿದ್ದು ನಮಗೆಲ್ಲಾ ಆಘಾತಕಾರಿಯಾಗಿತ್ತು. ನಂತರ 2007 ರಲ್ಲಿ ವಿಶ್ವಕಪ್ ನಲ್ಲಿ ಗ್ರೂಪ್ ಹಂತದಲ್ಲಿ ನಿರ್ಗಮಿಸಿದಾಗಲೂ ಹೀಗೇ ಆಗಿತ್ತು’ ಎಂದು ಧೋನಿ ಹೇಳಿದ್ದಾರೆ.
‘ಆದರೆ ಮ್ಯಾಚ್ ಫಿಕ್ಸಿಂಗ್ ನಲ್ಲಿ ನಮ್ಮ ಅಂದರೆ ಆಟಗಾರರ ತಪ್ಪು ಏನಿತ್ತು? ನಾವು ಏನು ತಪ್ಪು ಮಾಡಿದ್ದೆವು? ಹಾಗಿದ್ದರೂ ಕಠಿಣ ಶಿಕ್ಷೆ ಖಂಡಿತಾ ಅಂತ ನಮಗೆ ಗೊತ್ತಿತ್ತು. ಹಾಗೆಯೇ ಆಯಿತು. ಎರಡು ವರ್ಷ ನಿಷೇಧ ಶಿಕ್ಷೆ ಸಿಕ್ಕಿತು. ಆಗ ಆಟಗಾರರಲ್ಲಿ ಒಂದು ರೀತಿಯ ದುಃಖದ ಭಾವವಿತ್ತು’ ಎಂದು ಧೋನಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!