Publish Date: Wed, 04 Oct 2017 (09:42 IST)
Updated Date: Wed, 04 Oct 2017 (09:46 IST)
ಮುಂಬೈ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಮ್ಮ ‘ಬೆಟರ್ ಹಾಫ್’ ಯಾರೆಂದು ಕೊನೆಗೂ ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಭುವಿ ಡಿನ್ನರ್ ಡೇಟ್ ಗೆ ಹೋಗಿದ್ದಾಗ ತೆಗೆದಿದ್ದ ಅರ್ಧ ಕತ್ತರಿಸಿದ ಫೋಟೋ ಪ್ರಕಟಿಸಿದ್ದರು. ಈ ಫೋಟೋದಲ್ಲಿ ಅಂದು ತಮ್ಮ ಜತೆಗಿದ್ದ ಹುಡುಗಿಯ ಮುಖ ತೋರಿಸಿರಲಿಲ್ಲ. ಹೀಗಾಗಿ ಕೆಲವು ನಟಿಯರೊಂದಿಗೆ ಭುವಿ ಹೆಸರು ಥಳುಕು ಹಾಕಿಕೊಂಡಿತ್ತು.
ಆದರೆ ಇದೀಗ ತಮ್ಮ ಹುಡುಗಿಯನ್ನು ಜಗತ್ತಿಗೇ ಪರಿಚಯಿಸಿದ್ದಾರೆ ಭುವಿ. ಈಕೆ ಯಾರು ಏನು ಎಂದು ವಿವರಣೆ ಕೊಟ್ಟಿಲ್ಲ. ಆದರೆ ಇವಳೇ ನನ್ನ ಅರ್ಧಾಂಗಿ ಎಂದು ಭುವಿ ಅಂದು ಪ್ರಕಟಿಸಿದ್ದ ಫೋಟೋದ ಪೂರ್ತಿ ಭಾಗ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ