Select Your Language

Notifications

webdunia
webdunia
webdunia
webdunia

ಅಪ್ಪನಾಗುತ್ತಿದ್ದಾರೆ ವಿರಾಟ್ ಕೊಹ್ಲಿ! ಅನುಷ್ಕಾ ನೀಡಿದ ಸಿಹಿ ಸುದ್ದಿ

ಅಪ್ಪನಾಗುತ್ತಿದ್ದಾರೆ ವಿರಾಟ್ ಕೊಹ್ಲಿ! ಅನುಷ್ಕಾ ನೀಡಿದ ಸಿಹಿ ಸುದ್ದಿ
ಮುಂಬೈ , ಗುರುವಾರ, 27 ಆಗಸ್ಟ್ 2020 (11:11 IST)
ಮುಂಬೈ: ಅಭಿಮಾನಿಗಳು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಆ ಸುದ್ದಿ ಕೊನೆಗೂ ವಿರಾಟ್ ದಂಪತಿ ನೀಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಆ ಗುಡ್ ನ್ಯೂಸ್ ನ್ನು ಬಹಿರಂಗಗೊಳಿಸಿದ್ದಾರೆ.


ಅನುಷ್ಕಾ ಈಗ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಸ್ವತಃ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ‘ಹೌದು, ನಾವೀಗ ಮೂವರಾಗುತ್ತಿದ್ದೇವೆ. ಜನವರಿ 2021 ಕ್ಕೆ ಮಗುವಿನ ಆಗಮನವಾಗಲಿದೆ’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ. ಅನುಷ್ಕಾ ಜತೆಗೆ ವಿರಾಟ್ ಕೂಡಾ ಇದೇ ಸಂದೇಶವನ್ನು ಬರೆದುಕೊಂಡಿದ್ದು, ತಾರಾ ದಂಪತಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯೇ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಪ್ಟನ್ ಕೆಎಲ್ ರಾಹುಲ್ ಗೆ ಫುಲ್ ಪವರ್ ಕೊಟ್ಟ ಅನಿಲ್ ಕುಂಬ್ಳೆ