Publish Date: Wed, 09 Mar 2022 (11:03 IST)
Updated Date: Wed, 09 Mar 2022 (11:06 IST)
ಬೆಂಗಳೂರು: ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಫೋಟೋಗ್ರಫಿ ಒಂದು ಹವ್ಯಾಸ. ಇದೀಗ ಅವರ ಪುತ್ರ ಮಯಾಸ್ ಕೂಡಾ ತಂದೆಯ ಹಾದಿಯಲ್ಲಿದ್ದಾನೆ.
ತಂದೆಯಂತೇ ಮಯಾಸ್ ಕುಂಬ್ಳೆಯೂ ಫೋಟೋಗ್ರಫಿಯನ್ನು ಹವ್ಯಾಸ ಮಾಡಿಕೊಂಡಿದ್ದಾನೆ. ಮಯಾಸ್ ಸೆರೆಹಿಡಿದಿರುವ ಫೋಟೋಗಳು ಮತ್ತು ಅವುಗಳ ವಿವರಗಳಿರುವ ಸಫಾರಿ ಸಗಾ ಎನ್ನುವ ಪುಸ್ತಕವೊಂದನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಮಯಾಸ್ ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಸಫಾರಿ ಮಾಡಿ ವನ್ಯ ಜೀವಿಗಳ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಮಯಾಸ್ ಸಾಧನೆಯನ್ನು ಕೊಂಡಾಡಿದ ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆಯೂ ಈ ಹಿಂದೆ ಕ್ರಿಕೆಟ್ ಪ್ರವಾಸಗಳ ಸಂದರ್ಭಗಳಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಗಳಿಗೆಯನ್ನು ಸ್ಮರಿಸಿಕೊಂಡಿದ್ದಾರೆ.