Publish Date: Mon, 14 Feb 2022 (17:09 IST)
Updated Date: Mon, 14 Feb 2022 (17:11 IST)
ಕೋಲ್ಕೊತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಟೀಂ ಇಂಡಿಯಾ ಕ್ರಿಕೆಟಿಗರು ಕೋಲ್ಕೊತ್ತಾಗೆ ಬಂದಿಳಿದಿದ್ದಾರೆ.
ಬುಧವಾರದಿಂದ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಿನ್ನೆ ಐಪಿಎಲ್ ಹರಾಜು ಪ್ರಕ್ರಿಯೆಯ ಹಿನ್ನಲೆಯಲ್ಲಿ ಆಟಗಾರರು ಅಹಮ್ಮದಾಬಾದ್ ನಲ್ಲಿಯೇ ಇದ್ದರು.
ಇದೀಗ ಟಿ20 ಸರಣಿಗೆ ತಯಾರಾಗಲು ಕೋಲ್ಕೊತ್ತಾಗೆ ಬಂದಿಳಿದಿದ್ದಾರೆ. ನಾಳೆಯಿಂದ ಕ್ರಿಕೆಟಿಗರು ಅಭ್ಯಾಸ ಆರಂಭಿಸಲಿದ್ದಾರೆ.