Publish Date: Sun, 13 Feb 2022 (17:29 IST)
Updated Date: Sun, 13 Feb 2022 (17:30 IST)
ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ದಿನ ಕೆಲವು ಆಟಗಾರರನ್ನು ಖರೀದಿಸಿದೆ. ಆ ಪೈಕಿ ಅನೂಜ್ ರಾವತ್ ಕೂಡಾ ಒಬ್ಬರು.
3.4 ಕೋಟಿ ರೂ. ಕೊಟ್ಟು ಅನೂಜ್ ರಾವತ್ ರನ್ನು ಆರ್ ಸಿಬಿ ಇಂದು ಖರೀದಿ ಮಾಡಿದೆ. ಇದರ ಬೆನ್ನಲ್ಲೇ ರಾವತ್ ಟ್ವಿಟರ್ ಮೂಲಕ ಆರ್ ಸಿಬಿಗೆ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದ ಅನೂಜ್ ನಮಸ್ಕಾರ ಬೆಂಗಳೂರು ಎಂದು ಕನ್ನಡದಲ್ಲೇ ಬರೆಯುವ ಮೂಲಕ ಧನ್ಯವಾದ ಸಲ್ಲಿಸಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.