ಬೆಂಗಳೂರು: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರಾಜು ವೈಖರಿ ಅಭಿಮಾನಿಗಳಿಗೆ ಅಸಮಾಧಾನ ತಂದಿದೆ.
									
			
			 
 			
 
 			
					
			        							
								
																	ಕೊಹ್ಲಿ ಬಳಿಕ ನಾಯಕನ ಹುಡುಕಾಟದಲ್ಲಿದ್ದ ಆರ್ ಸಿಬಿ ಶ್ರೇಯಸ್ ಐಯರ್ ಅಥವಾ ಡೇವಿಡ್ ವಾರ್ನರ್ ರಂತಹ ಪ್ರಮುಖ ಆಟಗಾರರನ್ನು ಖರೀದಿಸಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಶ್ರೇಯಸ್ ಕೆಕೆಆರ್ ಪಾಲಾದರೆ ವಾರ್ನರ್ ಡೆಲ್ಲಿ ತಂಡ ಕೂಡಿಕೊಂಡಿದ್ದಾರೆ.
									
										
								
																	ಪ್ರಮುಖ ಆಟಗಾರರನ್ನು ಖರೀದಿಸುವುದಿರಲಿ, ತಂಡದಲ್ಲೇ ಇದ್ದ ಅತ್ಯುತ್ತಮ ಆಟಗಾರರಾದ ದೇವದತ್ತ್ ಪಡಿಕ್ಕಲ್, ಕೆ. ಭರತ್ ಅಂತಹ ಉತ್ತಮ ಬ್ಯಾಟಿಗರನ್ನೂ ಬಿಟ್ಟುಕೊಟ್ಟಿದೆ. ಬದಲಾಗಿ ಹೆಚ್ಚು ಅನುಭವವಿರದ ಆಟಗಾರರನ್ನು ದುಬಾರಿ ಬೆಲೆ ತೆತ್ತು ಖರೀದಿಸಿದೆ.
									
											
							                     
							
							
			        							
								
																	ಆರ್ ಸಿಬಿಯ ಬಿಡ್ ನೋಡಿ ನೆಟ್ಟಿಗರು ಲೇವಡಿ ಮಾಡಿದ್ದು, ಮಕ್ಕಳ ಕೈಗೆ ಹಣ ಕೊಟ್ರೆ ಖರ್ಚು ಮಾಡುವ ರೀತಿಯಲ್ಲಿ ಆರ್ ಸಿಬಿ ಆಟಗಾರರ ಮೇಲೆ ಯೋಜನೆಯೇ ಇಲ್ಲದೆ ಖರ್ಚು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.