Select Your Language

Notifications

webdunia
webdunia
webdunia
webdunia

ಸೆಹ್ವಾಗ್ ಮಾತು ಕೇಳದೇ ಇದ್ರೆ ಟೆಸ್ಟ್ ನಲ್ಲಿ ಎರಡನೇ ಶತಕ ಸಿಡಿಸುತ್ತಿದ್ದೆ ಎಂದ ಅನಿಲ್ ಕುಂಬ್ಳೆ

ಸೆಹ್ವಾಗ್ ಮಾತು ಕೇಳದೇ ಇದ್ರೆ ಟೆಸ್ಟ್ ನಲ್ಲಿ ಎರಡನೇ ಶತಕ ಸಿಡಿಸುತ್ತಿದ್ದೆ ಎಂದ ಅನಿಲ್ ಕುಂಬ್ಳೆ
ಮುಂಬೈ , ಗುರುವಾರ, 9 ಮೇ 2019 (08:27 IST)
ಮುಂಬೈ: ವೀರೇಂದ್ರ ಸೆಹ್ವಾಗ್ ಎಂದರೆ ಸ್ಪೋಟಕ ಬ್ಯಾಟಿಂಗ್ ಗೆ ಉದಾಹರಣೆ. ಅವರು ಬಾಲ್ ಇರುವುದೇ ಹೊಡೆಯಲು ಎಂಬ ಪಾಲಿಸಿ ಹೊಂದಿದವರು.


ಹೀಗಿರುವ ಸೆಹ್ವಾಗ್ ಮಾತು ಕೇಳಿದ್ದಕ್ಕೇ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಶತಕ ಗಳಿಸುವ ಅವಕಾಶ ಕೈತಪ್ಪಿತಂತೆ. ಹಾಗಂತ ಕುಂಬ್ಳೆ ಸಂದರ್ಶನವೊಂದರಲ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ವಾಟ್ ದ ಡಕ್ ಶೋನಲ್ಲಿ ಸೆಹ್ವಾಗ್ ಜತೆ ಪಾಲ್ಗೊಂಡ ಕುಂಬ್ಳೆ ಈ ರೀತಿ ತಮಾಷೆ ಮಾಡಿದ್ದಾರೆ. ಸೆಹ್ವಾಗ್ ತಮಗೆ ತಮ್ಮಂತೆ ಸ್ಪೋಟಕ ಹೊಡೆತಕ್ಕೆ ಕೈ ಹಾಕಲು ಹೇಳಿ ಟೆಸ್ಟ್ ನಲ್ಲಿ ಮತ್ತೊಂದು ಶತಕ ಮಾಡುವ ಅವಕಾಶ ಕಳೆದುಕೊಂಡೆ. ಸದ್ಯ,ಅವರು ನಾನು ಬೌಲಿಂಗ್ ಮಾಡುವಾಗ ಸಲಹೆ ಕೊಡುತ್ತಿರಲಿಲ್ಲ. ಕೊಡುತ್ತಿದ್ದರೆ ಅಷ್ಟೇ ನನ್ನ ಕತೆ ಎಂದು ಕುಂಬ್ಳೆ ಸೆಹ್ವಾಗ್ ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಷರತ್ತಿನೊಂದಿಗೆ ಪತ್ನಿಯರನ್ನು ಕರೆದೊಯ್ಯಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಒಪ್ಪಿಗೆ