Select Your Language

Notifications

webdunia
webdunia
webdunia
webdunia

ಯುವರಾಜ್‌ ಸಿಕ್ಸರ್‌ ಅಬ್ಬರಕ್ಕೆ ಬೆಚ್ಚಿದ ಕಾಂಗರೂ ಪಡೆ: ಇಂಡಿಯಾ ಮಾಸ್ಟರ್ಸ್‌ ಫೈನಲ್‌ಗೆ ಲಗ್ಗೆ

Cricket legend Yuvraj Singh

Sampriya

ರಾಯ್‌ಪುರ , ಶುಕ್ರವಾರ, 14 ಮಾರ್ಚ್ 2025 (14:32 IST)
Photo Courtesy X
ರಾಯ್‌ಪುರ: ಕ್ರಿಕೆಟ್‌ ದಿಗ್ಗಜ ಯುವರಾಜ್‌ ಸಿಂಗ್‌ ಅವರ ಸಿಡಿಲಬ್ಬರದ ಅರ್ಧಶತಕದ ಬಲದಿಂದ ಇಂಡಿಯಾ ಮಾಸ್ಟರ್ಸ್‌ ತಂಡವು ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್)  ಟಿ20 ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ 94 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಮತ್ತು ವೆಸ್ಟ್‌ಇಂಡೀಸ್‌ ತಂಡಗಳು ಇಂದು ಪೈಪೋಟಿ ನಡೆಸಲಿವೆ. ಗೆದ್ದ ತಂಡವು ಭಾನುವಾರ ಫೈನಲ್‌ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.  

ಇಂಡಿಯಾ ಮಾಸ್ಟರ್ಸ್‌ ನಾಯಕ ಸಚಿನ್ ತೆಂಡೂಲ್ಕರ್ 42 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. 30 ಎಸೆತಗಳನ್ನು ಎದುರಿಸಿದ ಸಚಿನ್, ಏಳು ಬೌಂಡರಿಗಳನ್ನು ಬಾರಿಸಿದರು. ಆಸೀಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಯುವಿ, ಕೇವಲ 30 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 59 ರನ್ ಗಳಿಸಿ ಅಬ್ಬರಿಸಿದರು. ಸ್ಟುವರ್ಟ್ ಬಿನ್ನಿ 36, ಯೂಸುಫ್ ಪಠಾಣ್ 23 ಹಾಗೂ ಇರ್ಫಾನ್ ಪಠಾಣ್ ಅಜೇಯ 19 ರನ್‌ಗಳ ಕಾಣಿಕೆ ನೀಡಿದರು.

ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ ಮಾಸ್ಟರ್ಸ್, ಏಳು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ  ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್, ಬ್ಯಾಟಿಂಗ್ ವೈಫಲ್ಯವನ್ನು ಕಂಡಿತ್ತಲ್ಲದೆ 18.1 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್‌ ಆಯಿತು. ಇಂಡಿಯಾ ಮಾಸ್ಟರ್ಸ್ ಪರ ಶಹಬಾಜ್ ನದೀಂ ನಾಲ್ಕು ಮತ್ತು ವಿನಯ್ ಕುಮಾರ್ ಹಾಗೂ ಇರ್ಫಾನ್ ಪಠಾಣ್ ತಲಾ ಎರಡು ವಿಕೆಟ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಈ ತಾಕತ್ತು ಇರೋದು ಟೀಂ ಇಂಡಿಯಾಗೆ ಮಾತ್ರ: ಮಿಚೆಲ್ ಸ್ಟಾರ್ಕ್ ಹೊಗಳಿಕೆ