ಮುಂಬೈ: ಏಕಕಾಲಕ್ಕೆ ಟೆಸ್ಟ್, ಏಕದಿನ ಮತ್ತು ಟಿ20 ಫಾರ್ಮ್ಯಾಟ್ ನಲ್ಲಿ ಒಂದೇ ದಿನ ಬೇರೆ ಬೇರೆ ತಂಡಗಳನ್ನು ಆಡಿಸುವ ತಾಕತ್ತು ಇರೋದು ಟೀಂ ಇಂಡಿಯಾಗೆ ಮಾತ್ರ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಹೊಗಳಿದ್ದಾರೆ.
ನನ್ನ ಪ್ರಕಾರ ಟೀಂ ಇಂಡಿಯಾಗೆ ಮಾತ್ರವೇ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಂತಹ ತಂಡದ ವಿರುದ್ಧ ಒಂದೇ ದಿನ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯವನ್ನು ಆಡಿ ಗೆಲ್ಲುವ ತಾಕತ್ತು ಹೊಂದಿದೆ. ಭಾರತ ತಂಡ ಅಷ್ಟು ಪ್ರಬಲ ತಂಡ ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಐಪಿಎಲ್ ಆಡುವುದಕ್ಕಾಗಿ ಭಾರತದಲ್ಲಿರುವ ಮಿಚೆಲ್ ಸ್ಟಾರ್ಕ್ ಟೀಂ ಇಂಡಿಯಾವನ್ನು ಹಾಡಿಹೊಗಳಿದ್ದಾರೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಮಾತ್ರ ಒಂದೇ ತಾಣದಲ್ಲಿ ಆಡಿದ ಲಾಭ ಸಿಕ್ಕಿದೆ ಎಂಬ ಆಕ್ಷೇಪಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ನಾವು ಸಂಪೂರ್ಣವಾಗಿ ಹಾಗೆ ಹೇಳಲು ಸಾಧ್ಯವಿಲ್ಲ. ಇತ್ತೀಚೆಗಿನ ದಿನಗಳಲ್ಲಿ ನಾವು ಫ್ರಾಂಚೈಸಿ ಕ್ರಿಕೆಟಿಗಾಗಿ ವಿಶ್ವದ ನಾನಾ ತಾಣಗಳಲ್ಲಿ ಆಡುವ ಅವಕಾಶ ನಮಗೆ ಸಿಗುತ್ತಿದೆ. ಆದರೆ ಭಾರತೀಯ ಕ್ರಿಕೆಟಿಗರು ವಿದೇಶ ಲೀಗ್ ನಲ್ಲಿ ಆಡುವುದಿಲ್ಲ. ಹೀಗಾಗಿ ದುಬೈ ತಾಣದಲ್ಲಿ ಭಾರತಕ್ಕೆ ಅನುಕೂಲವಾಗುವ ಸಾಧ್ಯತೆಯಿರಲಿಲ್ಲ ಎಂದಿದ್ದಾರೆ.