Select Your Language

Notifications

webdunia
webdunia
webdunia
webdunia

ಐಪಿಎಲ್ 2025 ಗೆ ಮೊದಲು ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡ ವಿರಾಟ್ ಕೊಹ್ಲಿ

Virat Kohli

Krishnaveni K

ಮುಂಬೈ , ಶುಕ್ರವಾರ, 14 ಮಾರ್ಚ್ 2025 (09:59 IST)
Photo Credit: X
ಮುಂಬೈ: ಐಪಿಎಲ್ 2025 ಆರಂಭಕ್ಕೆ ಮುನ್ನ ಆರ್ ಸಿಬಿ ಕಿಂಗ್ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ನೊಂದಿಗೆ ಮಿಂಚುತ್ತಿದ್ದಾರೆ.

ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಆರ್ ಸಿಬಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಈ ಸಲವಾದರೂ ಕಪ್ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.

ಇದರ ನಡುವೆ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡ ಫೋಟೋಗಳು  ವೈರಲ್ ಆಗಿದೆ. ಪ್ರತೀ ಬಾರಿಯೂ ಐಪಿಎಲ್ ಗೆ ಮುನ್ನ ವಿರಾಟ್ ಕೊಹ್ಲಿ ಹೊಸ ಹೊಸ ಹೇರ್ ಸ್ಟೈಲ್ ನೊಂದಿಗೆ ನಮ್ಮೆದುರು ಬರುತ್ತಾರೆ. ಈ ಬಾರಿಯೂ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

ಸೆಲೆಬ್ರಿಟಿ ಹೇರ್ ಸ್ಟೈಲಿಶ್ ಅಲಿಮ್ ಹಕೀಂ ಬಳಿಯೇ ಪ್ರತೀಬಾರಿಯೂ ಕೊಹ್ಲಿ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಾರೆ. ಈ ಬಾರಿಯೂ ಅವರ ಬಳಿಯೇ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಕೊಹ್ಲಿ ಹೊಸ ಲುಕ್ ನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದು ಈ ಬಾರಿ ಕಪ್ ಕೂಡಾ ಗೆಲ್ಲಿ ಎಂದು ಹಾರೈಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ರಿಷಭ್ ಪಂತ್ ಸಹೋದರಿಯ ಮದುವೆಯಲ್ಲಿ ಒಟ್ಟಿಗೆ ಪೋಸ್‌ ಕೊಟ್ಟ ಧೋನಿ, ಗಂಭೀರ್