ಬೆಂಗಳೂರು: ಆರ್ ಸಿಬಿ ಈ ಬಾರಿ ಎರಡನೇ ಕ್ವಾಲಿಫೈಯರ್ ಗೆ ಬರುತ್ತೆ ಬಿಡಿ... ಹೀಗಂತ ಸಿಎಸ್ ಕೆ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಅಂಬಟಿ ರಾಯುಡು ಜೋಕ್ ಮಾಡಿದ್ದಾರೆ. ಅವರ ಜೋಕ್ ನೋಡಿದರೆ ಆರ್ ಸಿಬಿ ಎಂದರೆ ಇಷ್ಟು ಸದರ ಆಗೋಯ್ತಾ ಎಂದು ಆಕ್ರೋಶ ಹೊರಬರಬಹುದು.
ವೀಕ್ಷಕ ವಿವರಣೆ ಮಾಡುತ್ತಿದ್ದಾಗ ಈ ಬಾರಿ ಯಾರು ಚಾಂಪಿಯನ್ ಆಗುತ್ತಾರೆ, ಯಾವ ತಂಡ ಯಾವ ರೀತಿ ಪ್ರದರ್ಶನ ನೀಡಬಹುದು ಎಂದು ಚರ್ಚೆ ನಡೆಯುತ್ತಿತ್ತು. ಈ ವೇಳೆ ಆರ್ ಸಿಬಿ ಒಮ್ಮೆಯೂ ಟೈಟಲ್ ವಿನ್ ಆಗದೇ ಇರುವ ಬಗ್ಗೆ ಮಾತು ಬಂತು. ಇಷ್ಟು ದೊಡ್ಡ ಫ್ಯಾನ್ ಬೇಸ್ ಇದ್ದೂ ಆರ್ ಸಿಬಿಗೆ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಮಾತು ಬಂತು. ಈ ಸಾರಿ ಆರ್ ಸಿಬಿ ಪ್ರದರ್ಶನ ಸುಧಾರಿಸಬಹುದು ಎಂದು ಸಂಜಯ್ ಬಂಗಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಜೋಕ್ ಮಾಡಿದ ಅಂಬಟಿ ರಾಯುಡು ಹೌದು ಹೌದು. ಆರ್ ಸಿಬಿ ಈ ಬಾರಿ ಇನ್ನೊಂದು ತಡೆಗೋಡೆ ದಾಟಬಹುದು. ಮುಂದಿನ ಸಾರಿ ಆರ್ ಸಿಬಿ ಎರಡನೇ ಕ್ವಾಲಿಫೈಯರ್ ಗೆ ಏರಬಹುದು ಎಂದು ತಮಾಷೆ ಮಾಡಿದ್ದಾರೆ.
ಆಗ ಸಂಜಯ್ ಬಂಗಾರ್ ಇಷ್ಟು ಕೇವಲವಾಗಿ ಮಾತನಾಡುವುದು ಸರಿಯಲ್ಲ. ಆರ್ ಸಿಬಿ ಅಭಿಮಾನಿಗಳು ನಿಮ್ಮನ್ನು ಗಮನಿಸುತ್ತಿರುತ್ತಾರೆ ಎಂದಿದ್ದಾರೆ. ಇದಕ್ಕೆ ರಾಯುಡು ನೋಡಲಿ ಬಿಡಿ ಎಂದು ಉದ್ಧಟತನ ಮೆರೆದಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬರಂತೂ ಇವರ ಈ ದುರಹಂಕಾರಕ್ಕೇ ಧೋನಿ ಸಿಎಸ್ ಕೆ ತಂಡದಿಂದ ಹೊರಹಾಕಿದ್ದಾರೆ ಎಂದಿದ್ದಾರೆ.