Select Your Language

Notifications

webdunia
webdunia
webdunia
webdunia

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವೇ ಬೇಡ ಎಂದ ಕೆಎಲ್ ರಾಹುಲ್: ಎಲ್ಲದಕ್ಕೂ ಪತ್ನಿ ಅಥಿಯಾ ಕಾರಣ

KL Rahul

Krishnaveni K

ನವದೆಹಲಿ , ಮಂಗಳವಾರ, 11 ಮಾರ್ಚ್ 2025 (14:18 IST)
ದೆಹಲಿ: ಈ ಬಾರಿ ಐಪಿಎಲ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿದ್ದಾರೆ. ಆದರೆ ಡೆಲ್ಲಿ ತಂಡದ ನಾಯಕತ್ವ ನೀಡುತ್ತೇವೆಂದರೂ ರಾಹುಲ್ ನಯವಾಗಿ ತಿರಸ್ಕರಿಸಿದ್ದಾರಂತೆ. ಇದಕ್ಕೆ ಅವರ ಪತ್ನಿ ಅಥಿಯಾನೇ ಕಾರಣ ಎನ್ನಲಾಗುತ್ತಿದೆ.

ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಗೆ ಆಯ್ಕೆಯಾದಾಗ ಅವರು ಈ ಬಾರಿ ಪಕ್ಕಾ ಕ್ಯಾಪ್ಟನ್ ಆಗಲಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ರಿಷಭ್ ಪಂತ್ ರಿಂದ ತೆರವಾದ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಡೆಲ್ಲಿ ಫ್ರಾಂಚೈಸಿ ಆರಿಸಿಕೊಂಡಿತ್ತು.

ಆದರೆ ರಾಹುಲ್ ಮಾತ್ರ ಈಗ ಡೆಲ್ಲಿ ಫ್ರಾಂಚೈಸಿ ಬಿಗ್ ಆಫರ್ ನೀಡಿದರೂ ಕ್ಯಾಪ್ಟನ್ಸಿ ಮಾತ್ರ ಬೇಡ ಎಂದಿದ್ದಾರಂತೆ. ನಾನು ಆಟಗಾರನಾಗಿಯೇ ಇರಲು ಬಯಸುತ್ತೇನೆ. ಬೇರೆ ಜವಾಬ್ಧಾರಿಗಳು ನನಗೆ ಬೇಡ ಎಂದು ರಾಹುಲ್ ಹೇಳಿದ್ದಾರಂತೆ. ಇದಕ್ಕೆ ಅವರ ಪತ್ನಿ ಅಥಿಯಾರೇ ಕಾರಣ ಎನ್ನಲಾಗುತ್ತಿದೆ.

ಅಥಿಯಾ ಈಗ ತುಂಬು ಗರ್ಭಿಣಿ. ಈ ಕ್ಯೂಟ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಪತ್ನಿಯ ಹೆರಿಗೆ ವೇಳೆ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬೇಕಾಗಬಹುದು ಎಂಬ ಕಾರಣಕ್ಕೆ ರಾಹುಲ್ ನಾಯಕತ್ವ ಬೇಡ ಎಂದಿದ್ದಾರೆ ಎನ್ನಲಾಗಿದೆ. ರಾಹುಲ್ ನಾಯಕರಾಗದೇ ಇದ್ದಲ್ಲಿ ಅಕ್ಸರ್ ಪಟೇಲ್ ಅಥವಾ ಆರ್ ಸಿಬಿಯಿಂದ ಡೆಲ್ಲಿಗೆ ಹೋಗಿರುವ ಫಾ ಡು ಪ್ಲೆಸಿಸ್ ತಂಡದ ನಾಯಕರಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳುತ್ತಾ ಆರ್‌ಸಿಬಿ: ಮುಂಬೈ ಗೆದ್ದರೆ ನೇರ ಫೈನಲ್‌ಗೆ ಟಿಕೆಟ್‌