ಮುಂಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಅಮೋಘ ಜಯಗಳಿಸುತ್ತಿದ್ದ ಹಾಗೇ ಕೆಎಲ್ ರಾಹುಲ್ ಪತ್ನಿ, ಆಥಿಯಾ ಶೆಟ್ಟಿ ಅವರು ವಿಶೇಷ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆಥಿಯಾ ಅವರು ಪತಿಯನ್ನು ಹುರಿದುಂಬಿಸಲು ಸ್ಡೇಡಿಯಂಗೆ ಬರಲಿಲ್ಲ. ಆದರೆ ಮ್ಯಾಚ್ ಅನ್ನು ಲೈವ್ ನೋಡಿ, ಮನೆಯಿಂದಲೇ ರಾಹುಲ್‌ಗೆ ಹುರಿದುಂಬಿಸಿದ್ದಾರೆ. ಪೋಸ್ಟ್ ಮೂಲಕ ತಮ್ಮ ಸಂತೋಷ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದರು.
ಹಂಚಿಕೊಂಡ ಪೋಸ್ಟ್‌ನಲ್ಲಿ ಪ್ರತಿಷ್ಠಿತ ಟ್ರೋಫಿಯನ್ನು ಭಾರತ ಗೆದ್ದ ನಂತರ ಅಥಿಯಾ ಟಿವಿಯ ಪಕ್ಕದಲ್ಲಿ ನಿಂತು ರಾಹುಲ್ ಅವರ ಸಂತೋಷದ ಆಚರಣೆಯನ್ನು ವೀಕ್ಷಿಸುತ್ತಿರುವುದು ಕಂಡುಬರುತ್ತದೆ.
ಚಿತ್ರದಲ್ಲಿ ಅವರ ಮಗುವಿನ ಉಬ್ಬು ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಪೋಸ್ಟ್‌ನಲ್ಲಿ ರಾಹುಲ್ ಅವರನ್ನು ಟ್ಯಾಗ್ ಮಾಡಿ ಹೃದಯದ ಎಮೋಜಿಯನ್ನು ಸೇರಿಸಿದ್ದಾರೆ.