Select Your Language

Notifications

webdunia
webdunia
webdunia
webdunia

ಮತ್ತೆ ಬ್ಯಾಟ್‌ ಹಿಡಿಯಲಿರುವ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್‌: ಯಾವ ತಂಡಕ್ಕಾಗಿ ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲಿರುವ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್‌: ಯಾವ ತಂಡಕ್ಕಾಗಿ ಗೊತ್ತಾ

Sampriya

ಮುಂಬೈ , ಶುಕ್ರವಾರ, 14 ಫೆಬ್ರವರಿ 2025 (21:01 IST)
Photo Courtesy X
ಮುಂಬೈ: ಕ್ರಿಕೆಟ್‌ ದೇವರು ಖ್ಯಾತಿಯ ಸಚಿನ್‌ ತೆಂಡೂಲ್ಕರ್‌ ಮತ್ತೆ ಬ್ಯಾಟ್‌ ಹಿಡಿಯಲಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ಕ್ರಿಕೆಟ್‌ ದಿಗ್ಗಜ 12 ವರ್ಷಗಳ ಬಳಿಕ ಮತ್ತೆ ಕ್ರೀಸ್‌ಗೆ ಇಳಿಯುವರು.

51 ವರ್ಷದ ಸಚಿನ್ ತೆಂಡೂಲ್ಕರ್ ಅವರು ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) ಕ್ರಿಕೆಟ್ ಟೂರ್ನಿಯಲ್ಲಿ ಕ್ರಮವಾಗಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.

ಫೆಬ್ರುವರಿ 22 ರಿಂದ ಮಾರ್ಚ್‌ 16ರವರೆಗೆ ಟೂರ್ನಿಯು ನಡೆಯಲಿದೆ. ಮುಂಬೈ, ವಡೋದರಾ ಮತ್ತು ರಾಯಪುರದಲ್ಲಿ ಪಂದ್ಯಗಳು  ಆಯೋಜನೆಯಾಗಲಿವೆ. ಟೂರ್ನಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳೂ ಆಡಲಿವೆ.

ಭಾರತದ ಮಾಸ್ಟರ್ಸ್‌ ತಂಡದಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಮತ್ತು ಅಂಬಟಿ ರಾಯುಡು ಸ್ಥಾನ ಪಡೆದಿದ್ದಾರೆ. ಸಚಿನ್ ನಾಯಕತ್ವದಲ್ಲಿ ಅವರು ಆಡಲಿದ್ದಾರೆ.

ದಿಗ್ಗಜ ವಿಕೆಟ್‌ಕೀಪರ್ ಕುಮಾರ ಸಂಗಕ್ಕಾರ ಶ್ರೀಲಂಕಾ ತಂಡಕ್ಕೆ ನಾಯಕರಾಗಿದ್ದಾರೆ. ಶ್ರೀಲಂಕಾ ಮಾಸ್ಟರ್ಸ್ ತಂಡದಲ್ಲಿ ಸ್ಫೋಟಕ ಶೈಲಿಯ ಆರಂಭಿಕ ಬ್ಯಾಟರ್ ರೊಮೇಶ್ ಕಲುವಿತರಣ, ವೇಗಿ ಸುರಾಂಗ್ ಲಕ್ಮಲ್ ಮತ್ತು ಉಪುಲ್ ತರಂಗಾ ಅವರು ಆಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

TATA WPL: ಟಾಸ್ ವೇಳೆ ಸ್ಮೃತಿ ಮಂಧನ ಹೆಸರು ಹೇಳುತ್ತಿದ್ದಂತೆ ಆರ್ ಸಿಬಿ ಫ್ಯಾನ್ಸ್ ರಿಯಾಕ್ಷನ್ ವಿಡಿಯೋ ನೋಡಿ