Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್‌ ಟ್ರೋಫಿಗೆ ಮುತ್ತಿಕ್ಕಿದ ಬೆನ್ನಲ್ಲೇ ರೋಹಿತ್‌ ಶರ್ಮಾಗೆ ಭರ್ಜರಿ ಬಡ್ತಿ: ಇನ್ನು ನಿವೃತ್ತಿಯ ಮಾತೇಯಿಲ್ಲ

Captain Rohit Sharma

Sampriya

ದುಬೈ , ಗುರುವಾರ, 13 ಮಾರ್ಚ್ 2025 (14:34 IST)
Photo Courtesy X
ದುಬೈ: ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಸಿದ್ದರು. ಅವರ ಅಮೋಘ ಆಟದ ನೆರವಿನಿಂದ ಭಾರತ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಪ್ರಕಟಿಸಿದ ಏಕದಿನ ರ‍್ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮಾಗೆ ಭರ್ಜರಿ ಬಡ್ತಿ ದೊರಕಿದ್ದು, ಈ ಮೂಲಕ ನಿವೃತ್ತಿಗೆ ಒತ್ತಾಯಿಸುವವರಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ.

ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಬಡ್ತಿ ಪಡೆದಿರುವ 37 ವರ್ಷದ ರೋಹಿತ್‌ ಶರ್ಮಾ ಈಗ ಮೂರನೇ ಸ್ಥಾನಕ್ಕೆ ಜಂಪ್‌ ಆಗಿದ್ದಾರೆ.  ನ್ಯೂಜಿಲೆಂಡ್‌ ವಿರುದ್ಧ ಫೈನಲ್‌ನಲ್ಲಿ ರೋಹಿತ್‌ 83 ಎಸೆತಗಳಲ್ಲಿ 76 ರನ್ ಹೊಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾರತದ ನಾಲ್ವರು ಬ್ಯಾಟರ್‌ಗಳು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಆರಂಭಿಕ ಬ್ಯಾಟರ್‌, ಉಪ ನಾಯಕ ಶುಭಮನ್ ಗಿಲ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಒಂದು ಸ್ಥಾನ ಕೆಳಗಿಳಿದು ಐದನೇ ಸ್ಥಾನಕ್ಕೆ ಸರಿದಿದ್ದಾರೆ. ಶ್ರೇಯಸ್‌ ಅಯ್ಯರ್ ಎಂಟನೇ ರ‍್ಯಾಂಕ್‌ ಪಡೆದಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಸ್ಪಿನ್ನರ್‌ಗಳಾಧ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಬಡ್ತಿ ಕಂಡು ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಎಡಗೈ ಸ್ಪಿನ್ನರ್‌ ಕುಲದೀಪ್ ಮೂರನೇ ಸ್ಥಾನಕ್ಕೇರಿದರೆ, ಜಡೇಜಾ ಹತ್ತನೇ ಸ್ಥಾನಕ್ಕೆ ಏರಿದ್ದಾರೆ.

ಏಕದಿನ ಆಲ್‌ರೌಂಡರ್‌ಗಳ ವಿಭಾಗದಲ್ಲಿ ನ್ಯೂಜಿಲೆಂಡ್‌ನ ಮೂವರು ಬಡ್ತಿ ಪಡೆದಿದ್ದಾರೆ. ಮಿಚೆಲ್‌ ಸ್ಯಾಂಟನರ್‌ ನಾಲ್ಕನೇ, ಮೈಕೆಲ್ ಬ್ರೇಸ್‌ವೆಲ್‌ ಏಳನೇ ಮತ್ತು ರಚಿನ್ ರವೀಂದ್ರ ಎಂಟನೇ ಸ್ಥಾನಕ್ಕೆ ಏರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

WPLನಲ್ಲಿ ಇಂದು ಹೈವೋಲ್ಟೇಜ್‌ ಪಂದ್ಯ: ಯಾರಿಗೆ ಫೈನಲ್‌ ಟಿಕೆಟ್‌, ಯಾರು ಮನೆಗೆ