Publish Date: Tue, 07 Mar 2023 (08:30 IST)
Updated Date: Tue, 07 Mar 2023 (08:55 IST)
ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಎರಡನೇ ಪಂದ್ಯವಾಡಲಿದೆ.
ಈಗಾಗಲೇ ಎರಡೂ ತಂಡಗಳು ಮೊದಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಡೆಲ್ಲಿ ಮೊದಲ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ, ಯುಪಿ ವಾರಿಯರ್ಸ್ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆಲುವು ಸಾಧಿಸಿದೆ.
ಹೀಗಾಗಿ ಈಗ ಎರಡೂ ತಂಡಗಳು ಎರಡನೇ ಗೆಲುವಿಗೆ ಹೋರಾಡಲಿದ್ದಾರೆ. ಮೊದಲ ಪಂದ್ಯಗಳಲ್ಲಿ ಎರಡೂ ತಂಡಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಡೆಲ್ಲಿ, ಯುಪಿಗಿಂತ ಸ್ಟ್ರಾಂಗ್ ಎನಿಸುತ್ತದೆ. ಆದರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಗಳಿಸಿದ ತಂಡ ಮೇಲುಗೈ ಸಾಧಿಸುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಟಾಸ್ ನಿರ್ಣಾಯಕವಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.