Publish Date: Mon, 06 Mar 2023 (08:40 IST)
Updated Date: Mon, 06 Mar 2023 (09:16 IST)
ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ಗುಜರಾತ್ ಜೈಂಟ್ಸ್ ಸತತ ಎರಡನೇ ಸೋಲು ಅನುಭವಿಸಿದೆ. ಯುಪಿ ವಾರಿಯರ್ಸ್ ವಿರುದ್ಧ 3 ವಿಕೆಟ್ ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಹರ್ಲೀನ್ ಡಿಯೋಲ್ 46 ರನ್ ಗಳಿಸಿ ಮಿಂಚಿದರು.
ಇದಕ್ಕೆ ಉತ್ತರವಾಗಿ ಯುಪಿ ವಾರಿಯರ್ಸ್ 19.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಯುಪಿ ಪರ ಕಿರನ್ ನಾವ್ ಗಿರೆ 53, ಗ್ರೇಸ್ ಹ್ಯಾರಿಸ್ 59 ರನ್ ಗಳಿಸಿದರು. ಕೊನೆಯಲ್ಲಿ ಸೋಫೀ ಎಕ್ಲಸ್ಟೋನ್ 12 ಎಸೆತಗಳಲ್ಲಿ 22 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ಕೊಡಿಸಿದರು. ಗುಜರಾತ್ ಪರ ಕಿಮ್ ಗಾರ್ತ್ 5 ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್ ಗೆಲುವಿನ ಖಾತೆ ತೆರೆದರೆ, ಗುಜರಾತ್ ಗೆ ಎರಡನೇ ಸೋಲಾಯಿತು.