ಮುಂಬೈ: ಡಬ್ಲ್ಯುಪಿಎಲ್ ನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ ಗಳ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 223 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್ ಸಿಬಿ ಪರ ಸ್ಮೃತಿ ಮಂಧನಾ 35, ಹೀದರ್ ನೈಟ್ 34 ರನ್ ಗಳಿಸಿದರು. ಮೇಘನಾ ಶಟ್ ಕೊನೆಯಲ್ಲಿ ಅಜೇಯರಾಗಿ 30 ರನ್ ಗಳಿಸಿದರು. ನಿಗದಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆರ್ ಸಿಬಿ ಸೋಲುಂಡಿತು. ಡೆಲ್ಲಿ ತಂಡದ ತಾರಾ ನೋರಿಸ್ 5 ವಿಕೆಟ್ ಗಳ ಗೊಂಚಲು ಪಡೆದರು.
ಈ ಸೋಲಿನ ಬಳಿಕ ನಾಯಕಿ ಸ್ಮೃತಿ ಮಂಧನಾ ನಿರ್ಧಾರಗಳ ಬಗ್ಗೆ ಅಭಿಮಾನಿಗಳು ಟೀಕಿಸಿದ್ದಾರೆ. ಸ್ಮೃತಿ ಟಾಸ್ ಗೆದ್ದೂ ಮೊದಲು ಫೀಲ್ಡಿಂಗ್ ಆಯ್ದುಕೊಂಡರು ತಪ್ಪು ಮಾಡಿದರು. ಅಲ್ಲದೆ, ಅವರು ನಾಯಕಿಯಾಗಿ ವೈಫಲ್ಯ ಅನುಭವಿಸಿದರು. ಫೀಲ್ಡಿಂಗ್ ಸೆಟ್ ಮಾಡುವಲ್ಲಿ, ಬೌಲರ್ ಗಳನ್ನು ಬಳಸುವಲ್ಲಿ ಸೋತಿದ್ದಾರೆ ಎಂದು ಅಭಿಮಾನಿಗಳು ಟೀಕಿಸಿದ್ದಾರೆ. ನಾಳೆ ಮುಂಬೈ ವಿರುದ್ಧ ಆರ್ ಸಿಬಿ ಪಂದ್ಯವಾಡಬೇಕಿದೆ.