Publish Date: Sun, 05 Mar 2023 (17:06 IST)
Updated Date: Sun, 05 Mar 2023 (17:08 IST)
ಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ದೊಡ್ಡ ಹೊಡೆತ ಅನುಭವಿಸಿದರು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ಪ್ರಚಂಡ ಬ್ಯಾಟಿಂಗ್ ನಡೆಸಿದರು. ಈ ಜೋಡಿ 14.3 ಓವರ್ ಗಳಲ್ಲಿ 162 ಜೊತೆಯಾಟವಾಡಿ ಬೇರ್ಪಟ್ಟಿತು. ಲ್ಯಾನಿಂಗ್ 43 ಎಸೆತಗಳಿಂದ 72 ರನ್ ಗಳಿಸಿ ಮೊದಲನೆಯವರಾಗಿ ಔಟಾದರೆ ಅವರ ಬೆನ್ನಲ್ಲೇ ಶಫಾಲಿ45 ಎಸೆತಗಳಿಂದ 84 ರನ್ ಗಳಿಸಿ ಔಟಾದರು.
ಇವರಿಬ್ಬರೂ ಔಟಾದ ಬಳಿಕ ಮರಿಝೈನ್ ಕಪ್ ರನ್ ಗತಿ ಹೆಚ್ಚಿಸುವ ಜವಾಬ್ಧಾರಿ ವಹಿಸಿಕೊಂಡರು. ಅವರು 17 ಎಸೆತಗಳಿಂದ ಅಜೇಯ 39 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಬಂದ ಜೆಮಿಮಾ ರೊಡ್ರಿಗಸ್ 15 ಎಸೆತಗಳಿಂದ 22 ರನ್ ಗಳಿಸಿ ಔಟಾಗದೇ ಉಳಿದರು. ಇದೀಗ ಆರ್ ಸಿಬಿಗೆ ಗೆಲ್ಲಲು ಕಠಿಣ ಪರಿಶ್ರಮ ಪಡಬೇಕಾಗಿದೆ.